ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಎಫ್‌ಎಂಸಿಜಿ ಅಂಗಸಂಸ್ಥೆ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯು ಕ್ಯಾಂಪಾ ಕೋಲಾ ಉತ್ಪನ್ನವನ್ನು ನೇಪಾಳದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕ್ಯಾಂಪಾ ಉತ್ಪನ್ನಗಳನ್ನು ನೇಪಾಳದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ರಿಲಯನ್ಸ್ ಕಂಪನಿಯು ಅಲ್ಲಿನ ಚೌಧರಿ ಸಮೂಹದ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಕ್ಯಾಂಪಾ ಬ್ರ್ಯಾಂಡ್‌ಅನ್ನು ರಿಲಯನ್ಸ್ ಕಂಪನಿಯು 2022ರಲ್ಲಿ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ನಂತರ, 2023ರಲ್ಲಿ ಈ ಬ್ರ್ಯಾಂಡ್ ಅಡಿಯಲ್ಲಿ ಅದು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಯುಎಇ, ಒಮಾನ್ ಮತ್ತು ಬಹರೇನ್ ದೇಶಗಳಲ್ಲಿಯೂ ಕ್ಯಾಂಪಾ ಉತ್ಪನ್ನಗಳು ಸಿಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.