ADVERTISEMENT

ರಿಲಯನ್ಸ್‌ ಸಿಎಫ್‌ಒ ಶ್ರೀಕಾಂತ್

ಪಿಟಿಐ
Published 25 ಮಾರ್ಚ್ 2023, 19:00 IST
Last Updated 25 ಮಾರ್ಚ್ 2023, 19:00 IST

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಆಗಿ ಶ್ರೀಕಾಂತ್‌ ವೆಂಕಟಾಚಾರಿ ಅವರನ್ನು ನೇಮಿಸಲಾಗಿದೆ. ಜೂನ್ 1 ರಿಂದ ಅವರು ಸಿಎಫ್‌ಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಸದ್ಯ ಸಿಎಫ್‌ಒ ಆಗಿರುವ ಅಲೋಕ್‌ ಅಗರ್ವಾಲ್‌ ಅವರನ್ನು ಕಂಪನಿ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಹಿರಿಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಹೀಗಾಗಿ ಸಿಎಫ್ಒ ಹೊಣೆಗಾರಿಕೆಯನ್ನು ಶ್ರೀಕಾಂತ್‌ಗೆ ನೀಡಲಾಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಶ್ರೀಕಾಂತ್ ಸದ್ಯ ಕಂಪನಿಯಲ್ಲಿ ಜಂಟಿ ಸಿಎಫ್‌ಒ ಆಗಿದ್ದಾರೆ. ಈ ಮೊದಲು ಅವರು ಸಿಟಿ ಗ್ರೂಪ್‌ನಲ್ಲಿ ಎರಡು ದಶಕಗಳವರೆಗೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.