ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅಂಗಸಂಸ್ಥೆಯಾಗಿರುವ ರಿಲಯನ್ಸ್ ರಿಟೇಲ್, ‘ಅಜಾರ್ಟ್’ ಹೆಸರಿನ ಪ್ರೀಮಿಯಂ ಫ್ಯಾಷನ್ ಮಳಿಗೆಯನ್ನು ಬೆಂಗಳೂರಿನಲ್ಲಿ ಗುರುವಾರ ಉದ್ಘಾಟಿಸಿದೆ.
ರಿಲಯನ್ಸ್‌ನ ಬ್ರ್ಯಾಂಡ್‌ಗಳಾದ ಪ್ರೊಅರ್ಥ್ ಸೇರಿದಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಇಲ್ಲಿ ಲಭ್ಯವಿರಲಿವೆ ಎಂದು ಕಂಪನಿ ತಿಳಿಸಿದೆ.
‘ಪ್ರೊಅರ್ಥ್’ ಸುಸ್ಥಿರ ಫ್ಯಾಷನ್ ಬ್ರ್ಯಾಂಡ್ ಆಗಿದ್ದು, ವಿಶ್ವದ ಇತರ ಸುಸ್ಥಿರ ಫ್ಯಾಷನ್ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಎಂದು ರಿಲಯನ್ಸ್ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಖಿಲೇಶ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನಲ್ಲಿ ಆರಂಭವಾಗಿರುವುದು ಅಜಾರ್ಟ್‌ನ ಮೊದಲ ಮಳಿಗೆ. ಮುಂದಿನ ಒಂಬತ್ತು ತಿಂಗಳಲ್ಲಿ 12 ನಗರಗಳಲ್ಲಿ 30ರಿಂದ 40 ಇಂತಹ ಮಳಿಗೆಗಳನ್ನು ಆರಂಭಿಸಲಾಗುತ್ತದೆ ಎಂದು ಪ್ರಸಾದ್ ಹೇಳಿದರು. ಮುಂದಿನ ಮೂರು ವರ್ಷಗಳಲ್ಲಿ ರಿಲಯನ್ಸ್ ರಿಟೇಲ್‌ನ ಶೇ 15ರಿಂದ ಶೇ 20ರಷ್ಟು ವಹಿವಾಟು ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಉತ್ಪನ್ನಗಳಿಂದ ಬರುವ ನಿರೀಕ್ಷೆ ಇದೆ ಎಂದರು.
ಭಾರತೀಯ ಹಾಗೂ ಪಾಶ್ಚಿಮಾತ್ಯ ಫ್ಯಾಷನ್ ಉಡುಪುಗಳು, ಗ್ರಾಹಕರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ನೆರವು ಅಜಾರ್ಟ್ ಮಳಿಗೆಯಲ್ಲಿ ಇರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.