
ನವದೆಹಲಿ (ಪಿಟಿಐ): ವೆನೆಜುವೆಲಾದಿಂದ ನೇರವಾಗಿ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಸರ್ಕಾರದಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪರವಾನಗಿ ಪಡೆದುಕೊಂಡಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ತೈಲ ಸಂಸ್ಕರಣಾ ಘಟಕವನ್ನು ಹೊಂದಿದೆ. ಈ ಪರವಾನಗಿಯಿಂದ ಕಂಪನಿಯ ಲಾಭ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿವೆ.
ಕಳೆದು ತಿಂಗಳು ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಅಮೆರಿಕ ಸೆರೆ ಹಿಡಿಯಿತು. ಬಳಿಕ, ವೆನೆಜುವೆಲಾದಿಂದ ತೈಲ ರಫ್ತು ಪುನರಾರಂಭಿಸಲು ಅಮೆರಿಕವು ಅಲ್ಲಿನ ತೈಲ ಕಂಪನಿಗಳಿಗೆ ಅನುಮತಿ ನೀಡಿತ್ತು.
ಇಲ್ಲಿಯವರೆಗೆ, ಅಮೆರಿಕವು ವ್ಯಾಪಾರಿಗಳ ಮೂಲಕ ವೆನೆಜುವೆಲಾದ ತೈಲ ಮಾರಾಟಕ್ಕೆ ಅನುಮತಿ ನೀಡಿತ್ತು. ಆದರೆ ಈಗ ಪರವಾನಗಿಯಿಂದ ನೇರವಾಗಿ ತೈಲವನ್ನು ಸಂಸ್ಥೆಗಳಿಂದಲೇ ಖರೀದಿಸಬಹುದಾಗಿದೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.