ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ತನ್ನ ಡಿಜಿಟಲ್ ಘಟಕ ಜಿಯೊ ಪ್ಲಾಟ್ಫಾರ್ಮ್ಸ್ನ ಶೇ 1.34 ಪಾಲು ಬಂಡವಾಳವನ್ನು ಜಾಗತಿಕ ಕಂಪನಿ ಜನರಲ್ ಅಟ್ಲಾಂಟಿಕ್ಗೆ ₹ 6,598.38 ಕೋಟಿಗೆ ಮಾರಾಟ ಮಾಡಿದೆ.
ಇದು, ಜಿಯೊ ಪ್ಲಾಟ್ಫಾರ್ಮ್ಸ್ನ ಪಾಲು ಬಂಡವಾಳ ಮಾರಾಟ ಮಾಡುವ ನಾಲ್ಕನೇ ಒಪ್ಪಂದ ಇದಾಗಿದೆ. ಇದುವರೆಗೆ ಫೇಸ್ಬುಕ್, ಸಿಲ್ವರ್ ಲೇಕ್ ಮತ್ತು ವಿಸ್ತಾ ಈಕ್ವಿಟಿ ಪಾರ್ಟನರ್ಸ್ ಪಾಲು ಖರೀದಿಸಿವೆ. ನಾಲ್ಕು ವಾರಗಳಲ್ಲಿ ಶೇ 14.8ರಷ್ಟು ಪಾಲು ಮಾರಾಟದಿಂದ ₹ 67,194.75 ಕೋಟಿ ಮೊತ್ತದ ಬಂಡವಾಳ ಸಂಗ್ರಹವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.