ADVERTISEMENT

ಹೊಸ ಕ್ವಿಡ್‌ RXL‌ ಮಾರುಕಟ್ಟೆಗೆ: ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 10:33 IST
Last Updated 7 ಜುಲೈ 2020, 10:33 IST
ರೆನೊ ಕ್ವಿಡ್‌
ರೆನೊ ಕ್ವಿಡ್‌   

ಫ್ರಾನ್ಸ್‌ನ ವಾಹನ ತಯಾರಿಕಾ ಕಂಪನಿ ರೆನೊ (Renault) ತನ್ನ ಎಂಟ್ರಿ ಲೆವೆಲ್‌ ಹ್ಯಾಚ್‌ಬ್ಯಾಕ್‌ ಕ್ವಿಡ್‌ನ ಹೊಸ ಆರ್‌ಎಕ್ಸ್‌ಎಲ್‌ ಅವತರಣಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದು ಬಿಎಸ್‌6 ಎಂಜಿನ್‌ ಹೊಂದಿದೆ. ಹೊಸ ಅವತರಣಿಕೆಯು ಎಂಟಿ ಮತ್ತು ಎಎಂಟಿ ಆಯ್ಕೆಗಳಲ್ಲಿ ಲಭ್ಯವಿದ್ದು, ಬೆಲೆ ಕ್ರಮವಾಗಿ ₹ 4.16 ಲಕ್ಷ ಮತ್ತು ₹ 4.48 ಲಕ್ಷ ಇದೆ.

‘ಭಾರತದಲ್ಲಿ ಇದುವರೆಗೆ 3.5 ಲಕ್ಷ ಕ್ವಿಡ್‌ ಮಾರಾಟವಾಗಿದ್ದು, ನಮ್ಮ ಬ್ರ್ಯಾಂಡ್‌ ಬಗ್ಗೆ ಗ್ರಾಹಕರು ಹೊಂದಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಇದು ಸೂಚಿಸುತ್ತದೆ’ ಎಂದು ರೆನೊ ಇಂಡಿಯಾದ ಸಿಇಒ ವೆಂಕಟರಾಮ್‌ ಎಂ. ಅವರು ಹೇಳಿದ್ದಾರೆ.

ADVERTISEMENT

ಈ ಕಾರ್‌ನ ಶೇ 98ರಷ್ಟು ಭಾಗ ಸ್ಥಳೀಯವಾಗಿಯೇ ಸಿದ್ಧವಾಗಿರುವುದರಿಂದ ಖರೀದಿ ಬೆಲೆ ಕಡಿಮೆ ಇರಲಿದೆ ಎಂದೂ ಕಂಪನಿ ಹೇಳಿದೆ.

20.32 ಇಂಚಿನ ಟಚ್‌ ಸ್ಕ್ರೀನ್‌ ಮೀಡಿಯಾ ಎನ್‌ಎವಿ ಎವಲ್ಯೂಷನ್‌, ಫರ್ಸ್ಟ್‌ ಇನ್‌ ಕ್ಲಾಸ್‌ ಎಲ್‌ಇಡಿ ಡಿಜಿಟಲ್‌ ಇನ್‌ಸ್ಟ್ರ್ಯುಮೆಂಟ್‌ ಕ್ಲಸ್ಟರ್, ಒನ್‌ ಟಚ್‌ ಲೇನ್ ಚೇಂಜ್‌ ಇಂಡಿಕೇಟರ್‌ ಸೌಲಭ್ಯಗಳಿವೆ.

’ಈಗ ಖರೀದಿಸಿ, ನಂತರ ಪಾವತಿಸಿ’ ಯೋಜನೆಯನ್ನು ಆರಂಭಿಸಿದ್ದು, ಕಂಪನಿಯ ಜಾಲತಾಣ ಅಥವಾ ಮೊಬೈಲ್‌ ಆ್ಯಪ್‌ ಇಲ್ಲವೇ ಡೀಲರ್‌ಶಿಪ್‌ನಲ್ಲಿ ಖರೀದಿಸಬಹುದಾಗಿದೆ.

ನಗದು ಕೊಡುಗೆ, ಎಕ್ಸ್‌ಚೇಂಜ್‌ ಪ್ರಯೋಜನಗಳು ಮತ್ತು ಶೇ 8.25ರ ವಿಶೇಷ ಬಡ್ಡಿದರದಲ್ಲಿ ಹಣಕಾಸಿನ ನೆರವು ಸೌಲಭ್ಯವೂ ಇದೆ. ’ಕಾಳಜಿ ತೋರುವವರಿಗಾಗಿ ಕಾಳಜಿ’ ಕಾರ್ಯಕ್ರಮದಡಿ ವೈದ್ಯರು ಮತ್ತು ಪೊಲೀಸ್‌ ಸಿಬ್ಬಂದಿಗೆ ಹೆಚ್ಚುವರಿ ಸೌಲಭ್ಯಗಳಿವೆ.

ಸುರಕ್ಷತಾ ಸೌಲಭ್ಯ

ಪಾದಚಾರಿ ಸುರಕ್ಷತೆ, ಎಬಿಎಸ್‌, ಇಬಿಡಿ, ಡ್ರೈವರ್‌ ಏರ್‌ಬ್ಯಾಗ್‌, ಡ್ರೈವರ್‌ ಮತ್ತು ಕೊ ಡ್ರೈವರ್‌ ಸೀಟ್‌ ಬೆಲ್ಟ್‌ ರಿಮೈಂಡರ್‌, ಸ್ಪೀಡ್‌ ಅಲರ್ಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.