ADVERTISEMENT

ರೆನೊ: ವಿಕ್ರಮನ್, ಸಂದೀಪ್ ನೇಮಕ

ಪಿಟಿಐ
Published 22 ಸೆಪ್ಟೆಂಬರ್ 2025, 16:12 IST
Last Updated 22 ಸೆಪ್ಟೆಂಬರ್ 2025, 16:12 IST
   

ಮುಂಬೈ: ಚೆನ್ನೈನಲ್ಲಿ ಇರುವ ರೆನೊ ನಿಸಾನ್ ತಂತ್ರಜ್ಞಾನ ಮತ್ತು ವಹಿವಾಟು ಕೇಂದ್ರದ ಮುಖ್ಯಸ್ಥ ಹುದ್ದೆಗೆ ವಿಕ್ರಮನ್ ವಿ. ಅವರನ್ನು ನೇಮಕ ಮಾಡಲಾಗಿದೆ ಎಂದು ರೆನೊ ಸಮೂಹವು ಈಚೆಗೆ ತಿಳಿಸಿದೆ. ಸಂದೀಪ್ ಭಾಂಬ್ರಾ ಅವರನ್ನು ಭಾರತದಲ್ಲಿನ ರೆನೊ ವಿನ್ಯಾಸ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ವಿಕ್ರಮನ್ ಅವರು ಮಹೀಂದ್ರ ಆ್ಯಂಡ್‌ ಮಹೀಂದ್ರ ಸಮೂಹದಿಂದ ರೆನೊ ಸಮೂಹ ಸೇರಿದ್ದಾರೆ. ಮಹೀಂದ್ರ ಆ್ಯಂಡ್‌ ಮಹೀಂದ್ರ ಸಮೂಹದಲ್ಲಿ ವಿಕ್ರಮನ್ ಅವರು ಎರಡು ದಶಕಕ್ಕೂ ಹೆಚ್ಚಿನ ಅವಧಿಗೆ ಕೆಲಸ ಮಾಡಿದ್ದರು.

‘ವಿಕ್ರಮನ್ ಮತ್ತು ಸಂದೀಪ್ ಭಾಂಬ್ರಾ ಅವರ ನೇಮಕವು ರೆನೊ ಸಮೂಹದ ಭಾರತದ ಪಯಣದಲ್ಲಿ ಪರಿವರ್ತನೆಯ ಸಂದರ್ಭವನ್ನು ಸಂಕೇತಿಸುತ್ತಿದೆ. ಆಟೊಮೊಬೈಲ್‌ ವಲಯದಲ್ಲಿ ಹೊಸತನದ ಆವಿಷ್ಕಾರದ ವಿಚಾರದಲ್ಲಿ ಭಾರತವು ಜಾಗತಿಕ ಮಟ್ಟದ ಕೇಂದ್ರವಾಗಿ ಬೆಳವಣಿಗೆ ಕಾಣುತ್ತಿದೆ’ ಎಂದು ರೆನೊ ಗ್ರೂಪ್ ಇಂಡಿಯಾ ಸಿಇಒ ಸ್ಟಿಫೇನ್ ಡೆಬ್ಲಾಯ್ಸ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.