ADVERTISEMENT

ಅಗತ್ಯ ವಸ್ತುಗಳ ಕೊರತೆ ಇಲ್ಲ: ರಿಟೇಲ್‌ ವರ್ತಕರ ಭರವಸೆ

ಪಿಟಿಐ
Published 1 ಏಪ್ರಿಲ್ 2020, 20:00 IST
Last Updated 1 ಏಪ್ರಿಲ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಕೊರತೆ ಇಲ್ಲ. ಆದರೆ ಜನರು ಗಾಬರಿಗೊಂಡು ಹೆಚ್ಚುವರಿ ಖರೀದಿ ನಡೆಸಿದರೆ ಮಾತ್ರವೇ ಸಮಸ್ಯೆ ಎದುರಾಗಲಿದೆ ಎಂದು ರಿಟೇಲ್‌ ವರ್ತಕರು ಹೇಳಿದ್ದಾರೆ.

ಲಾಕ್‌ಡೌನ್‌ನಿಂದ ದಿನಸಿ ಮತ್ತು ಅಗತ್ಯ ವಸ್ತುಗಳು ಸಿಗದೇ ಹೋಗುವ ಸಾಧ್ಯತೆ ಇದೆ ಎಂದು ಭಾವಿಸಿ ಜನರು ಹೆಚ್ಚುವರಿಯಾಗಿ ಖರೀದಿಸುತ್ತಿದ್ದಾರೆ. ಇದನ್ನು ತಡೆಯಲು ಫ್ಯೂಚರ್‌ ಗ್ರೂಪ್‌ ಮತ್ತು ವಿ–ಮಾರ್ಟ್‌ನಂತಹ ಕೆಲವು ಸಂಘಟಿತ ವಲಯದ ವಹಿವಾಟುದಾರರು ಗ್ರಾಹಕರ ಖರೀದಿ ಮೇಲೆ ಮಿತಿ ಹೇರಿದ್ದಾರೆ.

‘ಲಭ್ಯತೆಯಲ್ಲಿ ಕೊರತೆ ಇಲ್ಲ. ಆದರೆ ಲಾಕ್‌ಡೌನ್‌ನಿಂದಾಗಿ ಪೂರೈಕೆ ಸಮಸ್ಯೆ ಎದುರಾಗಿದೆ. ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಲಾಗಿದೆ. ಪೂರೈಕೆ ವ್ಯವಸ್ಥೆ ಸುಸೂತ್ರವಾಗಿ ನಡೆಯುವಂತೆ ಮಾಡಲಾಗುತ್ತಿದೆ’ ಎಂದು ರಿಟೇಲರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ ಸಿಇಒ ಕುಮಾರ್‌ ರಾಜಗೋಪಾಲನ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.