ADVERTISEMENT

ದೇಶದಲ್ಲಿನ ರಿಟೇಲ್‌ ಮಾರಾಟ ಪ್ರಮಾಣ ಚೇತರಿಕೆ

ಪಿಟಿಐ
Published 17 ಆಗಸ್ಟ್ 2021, 14:15 IST
Last Updated 17 ಆಗಸ್ಟ್ 2021, 14:15 IST

ನವದೆಹಲಿ: ಕೋವಿಡ್‌ ಪೂರ್ವದ ಸ್ಥಿತಿಗೆ ಹೋಲಿಸಿದರೆ ದೇಶದಲ್ಲಿನ ರಿಟೇಲ್‌ ಮಾರಾಟ ಪ್ರಮಾಣವು ಜುಲೈನಲ್ಲಿ ‌ಶೇಕಡ 72ರಷ್ಟು ಆಗಿದೆ ಎಂದು ಭಾರತೀಯ ರಿಟೇಲ್ ವರ್ತಕರ ಸಂಘ (ಆರ್‌ಎಐ) ಹೇಳಿದೆ. ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಳ್ಳುವುದಕ್ಕೂ ಮೊದಲಿನ, ಅಂದರೆ 2019ರ ಜುಲೈನಲ್ಲಿನ, ಒಟ್ಟಾರೆ ಮಾರಾಟದ ಪ್ರಮಾಣಕ್ಕೆ ಹೋಲಿಸಿ, ಸಂಘ ಈ ಮಾಹಿತಿ ನೀಡಿದೆ.

ಹಬ್ಬದ ಋತುಗಳು ಬರುತ್ತಿರುವುದರಿಂದ ಮಾರಾಟವು ಇನ್ನಷ್ಟು ಹೆಚ್ಚಾಗಲಿದೆ ಎನ್ನುವ ವಿಶ್ವಾಸವನ್ನು ಉದ್ಯಮಗಳು ಹೊಂದಿವೆ ಎಂದೂ ಅದು ತಿಳಿಸಿದೆ. ಸಂಘದ ಪ್ರಕಾರ, 2021ರ ಜೂನ್‌ನಲ್ಲಿ ಚೇತರಿಕೆಯ ಪ್ರಮಾಣವು ಕೋವಿಡ್‌ಗೂ ಮುಂಚಿನ ಶೇ 50ರಷ್ಟಿತ್ತು.

ದೇಶದದಕ್ಷಿಣ ಭಾಗದಲ್ಲಿ ಮಾರಾಟವು ಈ ವರ್ಷದ ಜುಲೈನಲ್ಲಿ ಹೆಚ್ಚಿನ ಚೇತರಿಕೆ ಕಂಡುಕೊಂಡಿದ್ದು, 2019ರ ಜುಲೈನ ಶೇ 82ರಷ್ಟಕ್ಕೆ ತಲುಪಿದೆ. ಪಶ್ಚಿಮ ಭಾಗದಲ್ಲಿ ಮಾರಾಟವು ಇನ್ನಷ್ಟು ಸುಧಾರಣೆ ಕಾಣಬೇಕಿದೆ. ಅಲ್ಲಿ ಚೇತರಿಕೆಯ ಪ್ರಮಾಣವು ಕೋವಿಡ್‌ಗೂ ಮೊದಲಿನ ಮಟ್ಟದ ಶೇ 57ರಷ್ಟಾಗಿದೆ ಎಂದು ಸಂಘ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.