ADVERTISEMENT

ಡಾಲರ್ ಎದುರು 12 ಪೈಸೆ ಕುಸಿತ ಕಂಡ ರುಪಾಯಿ

ಪಿಟಿಐ
Published 19 ಜನವರಿ 2022, 7:31 IST
Last Updated 19 ಜನವರಿ 2022, 7:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ 12 ಪೈಸೆ ಕುಸಿತ ಕಂಡಿದೆ. ಈ ಮೂಲಕ ಬುಧವಾರ ಡಾಲರ್ ಎದುರು ರೂಪಾಯಿ ಮೌಲ್ಯ ₹74.70 ಆಗಿದೆ.

ರೂಪಾಯಿ ಮೌಲ್ಯವು ಮಂಗಳವಾರ 33 ಪೈಸೆಗಳಷ್ಟು ಕುಸಿದು ಯುಎಸ್ ಡಾಲರ್ ಎದುರು ಎರಡು ವಾರಗಳ ಕನಿಷ್ಠ ಮಟ್ಟವಾದ ₹74.58 ಕ್ಕೆ ತಲುಪಿತ್ತು.

ಇನ್ನೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಶೇ 1.22 ರಷ್ಟು ಹೆಚ್ಚಳವಾಗುವ ಮೂಲಕ88.58 ಡಾಲರ್ ತಲುಪಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.