ADVERTISEMENT

ಅಭಿವೃದ್ಧಿ ದೇಶಗಳ ಕರೆನ್ಸಿಗಳಿಗಿಂತಲೂ ರೂಪಾಯಿ ಸ್ಥಿತಿ ಉತ್ತಮ: ದಾಸ್‌

ಪಿಟಿಐ
Published 22 ಜುಲೈ 2022, 12:53 IST
Last Updated 22 ಜುಲೈ 2022, 12:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಉತ್ತಮ ಸ್ಥಿತಿಯಲ್ಲಿ ಇದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಶುಕ್ರವಾರ ಹೇಳಿದ್ದಾರೆ.

ಬ್ಯಾಂಕ್‌ ಆಫ್‌ ಬರೋಡಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ರೂಪಾಯಿಯಅಸ್ಥಿರತೆಯನ್ನುಆರ್‌ಬಿಐಸಹಿಸುವುದಿಲ್ಲ. ಕೇಂದ್ರೀಯ ಬ್ಯಾಂಕ್‌ನ ಕ್ರಮಗಳಿಂದಾಗಿಯೇ ರೂಪಾಯಿ ಚಲನೆಯು ಸುಗಮವಾಗಿದೆ’ ಎಂದು ತಿಳಿಸಿದ್ದಾರೆ.

‘ಸಾಕಷ್ಟು ನಗದು ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಮಾರುಕಟ್ಟೆಗೆ ಅಮೆರಿಕದ ಡಾಲರ್‌ ಅನ್ನುಆರ್‌ಬಿಐ ಪೂರೈಸುತ್ತಿದೆ’ಎಂದಿದ್ದಾರೆ.

ADVERTISEMENT

‘ಹಣದುಬ್ಬರ ಗುರಿ ನಿಗದಿಯ ಕುರಿತ ರೂಪುರೇಷೆಯನ್ನು 2016ರಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಆಗಿಂದಲೂ ಅದು ಉತ್ತಮವಾಗಿ ಕೆಲಸ ಮಾಡಿದೆ. ದೇಶದ ಆರ್ಥಿಕತೆ ಮತ್ತು ಹಣಕಾಸು ವಲಯದ ಹಿತದೃಷ್ಟಿಯಿಂದ ಅದನ್ನು ಮುಂದುವರಿಸಲಾಗುವುದು. ತಕ್ಷಣದ ಅಗತ್ಯಗಳಿಗಾಗಿ ಗುರಿಯನ್ನು ಬದಲಾಯಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಭಾರತವು ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಆಮದು ಮಾಡಿಕೊಳ್ಳುವ ಸರಕುಗಳ ಬೆಲೆ ಹೆಚ್ಚಳದಿಂದಾಗಿ ದೇಶಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ ದೇಶದಲ್ಲಿ ತಯಾರಾದ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ಇದು ಸವಾಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.