ADVERTISEMENT

ಭಾರಿ ಇಳಿಕೆ ಕಂಡ ರೂಪಾಯಿ ಮೌಲ್ಯ

ಪಿಟಿಐ
Published 26 ಫೆಬ್ರುವರಿ 2021, 13:59 IST
Last Updated 26 ಫೆಬ್ರುವರಿ 2021, 13:59 IST

ಮುಂಬೈ: ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಶುಕ್ರವಾರ 104 ಪೈಸೆಗಳಷ್ಟು ಇಳಿಕೆ ಆಗಿದೆ. 2019ರ ಆಗಸ್ಟ್‌ 5ರ ನಂತರ ರೂಪಾಯಿಯು ಒಂದೇ ದಿನದಲ್ಲಿ ಕಂಡ ಅತಿದೊಡ್ಡ ಕುಸಿತ ಇದು.

ಶುಕ್ರವಾರದ ಅಂತ್ಯಕ್ಕೆ ಡಾಲರ್‌ ಎದುರು ರೂಪಾಯಿ ಮೌಲ್ಯ 73.47 ಆಗಿತ್ತು. ದಿನದ ವಹಿವಾಟಿನ ನಡುವಿನಲ್ಲಿ ರೂಪಾಯಿಯು 73.51ರ ಮಟ್ಟಕ್ಕೂ ಕುಸಿದಿತ್ತು. ನಂತರ ತುಸು ಚೇತರಿಕೆ ದಾಖಲಿಸಿತು.

‘ಅಮೆರಿಕದಲ್ಲಿ ಬಾಂಡ್‌ ಗಳಿಕೆಯು ಏರಿಕೆ ಕಂಡಿದೆ. ಅಲ್ಲಿನ ಅರ್ಥ ವ್ಯವಸ್ಥೆಯು ಸಹಜ ಸ್ಥಿತಿಗೆ ಬರುತ್ತಿರುವ ಸೂಚನೆಗಳು ಇವೆ. ಇದರಿಂದಾಗಿ ಡಾಲರ್ ಮೌಲ್ಯ ಹೆಚ್ಚಾಗಿದೆ’ ಎಂದು ರೆಲಿಗೇರ್‌ ಬ್ರೋಕಿಂಗ್‌ ಸಂಸ್ಥೆಯ ಇಂಧನ ಮತ್ತು ಕರೆನ್ಸಿ ಸಂಶೋಧನಾ ವಿಭಾಗದ ಉಪಾಧ್ಯಕ್ಷೆ ಸುಗಂಧಾ ಸಚದೇವ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.