ADVERTISEMENT

ಭಾರಿ ಕುಸಿತದ ಬಳಿಕ ಚೇತರಿಕೆ ಕಂಡ ಭಾರತದ ರೂಪಾಯಿ ಮೌಲ್ಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:10 IST
Last Updated 17 ಡಿಸೆಂಬರ್ 2025, 8:10 IST
ರೂಪಾಯಿ ಚೇತರಿಕೆ, ಸೂಚ್ಯಂಕ ಇಳಿಕೆ
ರೂಪಾಯಿ ಚೇತರಿಕೆ, ಸೂಚ್ಯಂಕ ಇಳಿಕೆ   

ನವದೆಹಲಿ: ಬುಧವಾರದ ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಭಾರತದ ರೂಪಾಯಿ ಮೌಲ್ಯ ಭಾರಿ ಏರಿಳಿತಕ್ಕೆ ಸಾಕ್ಷಿಯಾಗಿದೆ.

ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆಯು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಮೇಲಿನ ಅನಿಶ್ಚಿತತೆ ಹಾಗೂ ನಿರಂತರ ವಿದೇಶಿ ನಿಧಿಯ ಹೊರಹರಿವಿನ ಹೊಡೆತದಿಂದ ಚೇತರಿಕೆಗೆ ಕಾರಣವಾಗಿದೆ.

ಷೇರು ಮಾರುಕಟ್ಟೆಗಳಲ್ಲಿ ನಿರಂತರವಾಗಿ ಎಫ್‌ಪಿಐ ಮಾರಾಟ ಮುಂದುವರಿದಿದ್ದು ಡಿಸೆಂಬರ್‌ನಲ್ಲಿ ರೂಪಾಯಿ ದುರ್ಬಲತೆಗೆ ಪ್ರಮುಖ ಕಾರಣವಾಗಿದೆ. ವಿದೇಶಿ ಹೂಡಿಕೆದಾರರು ಕಳೆದ ಕೆಲವು ತಿಂಗಳುಗಳಲ್ಲಿ ಪ್ರತಿದಿನ ಹಲವಾರು ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಷೇರುಗಳನ್ನು ಪದೇ ಪದೇ ಮಾರಾಟ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಲ್ಲಿ ಮಾರಾಟ ತೀವ್ರಗೊಂಡಿದೆ ಎಂದು ಫಾರೆಕ್ಸ್ ವ್ಯಾಪಾರಿಗಳು ಹೇಳಿದ್ದಾರೆ.

ADVERTISEMENT

ಬುಧವಾರದ ಅಂತರಬ್ಯಾಕ್ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು 12 ಪೈಸೆ ಕುಸಿದು ನಿನ್ನೆಗಿಂತ ಕಡಿಮೆ 91.05ರಲ್ಲಿ ಆರಂಭವಾದ ರೂಪಾಯಿ ಮೌಲ್ಯ ತೀಕ್ಷ್ಣ ಚೇತರಿಕೆಗೆ ಸಾಕ್ಷಿಯಾಯಿತು. ದಿಢೀರನೆ 97 ಪೈಸೆ ಚೇತರಿಕೆ ಕಂಡು 89.96ಕ್ಕೆ ತಲುಪಿತ್ತು. ಬಳಿಕ, 90 ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ಮಂಗಳವಾರ ಅಮೆರಿಕ ಡಾಲರ್ ಎದುರು ಅಮೆರಿಕದ ರೂಪಾಯಿ ಮೌಲ್ಯ 91ಕ್ಕೆ ಕುಸಿದಿತ್ತು. 91.14ರವರೆಗೂ ಕುಸಿದು 90.93ಕ್ಕೆ ಸ್ಥಿರಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.