ADVERTISEMENT

ಭಾರತಕ್ಕೆ ತೈಲ ರಫ್ತು ಹೆಚ್ಚಿಸಲು ರೊಸ್ನೆಫ್ಟ್‌ ಒಪ್ಪಂದ

ಏಜೆನ್ಸೀಸ್
Published 29 ಮಾರ್ಚ್ 2023, 16:02 IST
Last Updated 29 ಮಾರ್ಚ್ 2023, 16:02 IST
   

ಮಾಸ್ಕೊ (ಎಎಫ್‌ಪಿ): ರಷ್ಯಾದ ರೊಸ್ನೆಫ್ಟ್‌ ಕಂಪನಿಯು ತಾನು ಭಾರತಕ್ಕೆ ರಫ್ತು ಮಾಡುವ ಕಚ್ಚಾ ತೈಲದ ಪ್ರಮಾಣವನ್ನು ಹೆಚ್ಚಿಸಲು ಇಂಡಿಯಲ್ ಆಯಿಲ್ ಕಾರ್ಪೊರೇಷನ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಬುಧವಾರ ತಿಳಿಸಿದೆ.

ರೊಸ್ನೆಫ್ಟ್‌ ಸಿಇಒ ಇಗಾರ್ ಸೆಷಿನ್ ಅವರು ಭಾರತಕ್ಕೆ ಭೇಟಿ ನೀಡಿ, ಐಒಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಭಾರತಕ್ಕೆ ರಫ್ತು ಮಾಡಲಿರುವ ಕಚ್ಚಾ ತೈಲದ ಪ್ರಮಾಣ ಹಾಗೂ ಅದರ ಬೆಲೆಯನ್ನು ರೊಸ್ನೆಫ್ಟ್‌ ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT