ADVERTISEMENT

ಕಚ್ಚಾ ತೈಲ ಪೂರೈಕೆ: ಮೊದಲ ಸ್ಥಾನಕ್ಕೆ ರಷ್ಯಾ

ರಾಯಿಟರ್ಸ್
Published 14 ಡಿಸೆಂಬರ್ 2022, 15:16 IST
Last Updated 14 ಡಿಸೆಂಬರ್ 2022, 15:16 IST

ನವದೆಹಲಿ : ರಷ್ಯಾ ದೇಶವು ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುವ ದೇಶಗಳ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಮೊದಲ ಸ್ಥಾನಕ್ಕೆ ಬಂದಿದೆ. ಭಾರತವು ನವೆಂಬರ್‌ನಲ್ಲಿ ರಷ್ಯಾದಿಂದ ಪ್ರತಿದಿನ 9.08 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ತರಿಸಿಕೊಂಡಿದೆ.

ಅಕ್ಟೋಬರ್‌ನಲ್ಲಿ ರಷ್ಯಾದಿಂದ ತರಿಸಿಕೊಂಡಿದ್ದ ಕಚ್ಚಾ ತೈಲದ ಪ್ರಮಾಣಕ್ಕೆ ಹೋಲಿಸಿದರೆ ಇದು ಶೇಕಡ 4ರಷ್ಟು ಹೆಚ್ಚು.

ಜಿ7 ದೇಶಗಳು, ಆಸ್ಟ್ರೇಲಿಯಾ ಮತ್ತು ಐರೋಪ್ಯ ಒಕ್ಕೂಟದ 27 ದೇಶಗಳು ರಷ್ಯಾದ ಕಚ್ಚಾ ತೈಲದ ಮೇಲೆ ಡಿಸೆಂಬರ್ 5ರಿಂದ ಅನ್ವಯವಾಗುವಂತೆ ಬೆಲೆ ಮಿತಿ ಹೇರಿವೆ. ಪ್ರತಿ ಬ್ಯಾರೆಲ್‌ಗೆ 60 ಡಾಲರ್ ಮಿತಿ ಹಾಕಿವೆ. ಈ ಮಿತಿಗಿಂತ ಹೆಚ್ಚಿನ ಬೆಲೆಗೆ ರಷ್ಯಾ ಕಚ್ಚಾ ತೈಲ ಮಾರಲು ಮುಂದಾದರೆ, ಅದಕ್ಕೆ ವಿಮೆ, ಹಣಕಾಸು ಮತ್ತು ಇತರ ಸೇವೆಗಳನ್ನು ಕೊಡಬಾರದು ಎಂಬ ಷರತ್ತು ಇದೆ.

ADVERTISEMENT

ನವೆಂಬರ್‌ನಲ್ಲಿ ಭಾರತ ಆಮದು ಮಾಡಿಕೊಂಡ ಕಚ್ಚಾ ತೈಲದಲ್ಲಿ ಶೇ 23ರಷ್ಟು ಪಾಲು ರಷ್ಯಾದ್ದು.

ಭಾರಿ ರಿಯಾಯಿತಿ: ಭಾರತವು ಡಿಸೆಂಬರ್‌ನಲ್ಲಿ ರಷ್ಯಾದ ಕಚ್ಚಾ ತೈಲವನ್ನು ‍ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಕಡಿಮೆ ಬೆಲೆಗೆ ಖರೀದಿಸಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.