
ಹೈದರಾಬಾದ್: ರಷ್ಯಾದ ತೈಲ ಉತ್ಪಾದನಾ ಕಂಪನಿಗಳ ಮೇಲೆ ಅಮೆರಿಕವು ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ, ಅಲ್ಲಿಂದ ಕಚ್ಚಾ ತೈಲ ಖರೀದಿಸುವ ಆಲೋಚನೆ ತಕ್ಷಣಕ್ಕೆ ಇಲ್ಲ ಎಂದು ಎಂಆರ್‌ಪಿಎಲ್ ಬುಧವಾರ ಹೇಳಿದೆ.
ರಷ್ಯಾದ ರೊಸ್ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ಅಮೆರಿಕವು ನಿರ್ಬಂಧ ವಿಧಿಸಿದೆ. ‘ನಿರ್ಬಂಧಕ್ಕೆ ಗುರಿಯಾಗಿರುವ ಕಂಪನಿಗಳನ್ನು ಬಿಟ್ಟು ಬೇರೆ ಕಂಪನಿಗಳಿಂದ ಕಚ್ಚಾ ತೈಲ ಖರೀದಿಯು ಎಂಆರ್‌ಪಿಎಲ್‌ಗೆ ಕಷ್ಟ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಸ್ಕರಿಸಿದ ತೈಲ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವ ಸರ್ಕಾರಿ ಸ್ವಾಮ್ಯದ ಉದ್ದಿಮೆ ಎಂಆರ್‌ಪಿಎಲ್ ಮಾತ್ರ. ಹೀಗಾಗಿ ನಿರ್ಬಂಧಗಳ ಉಲ್ಲಂಘನೆ ಆಗದಂತೆ ನಿಗಾ ವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಎಂಆರ್‌ಪಿಎಲ್ ಪ್ರತಿ ತಿಂಗಳು 30 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ನವೆಂಬರ್ ಹಾಗೂ ಡಿಸೆಂಬರ್‌ನ ಸಂಸ್ಕರಣಾ ಅಗತ್ಯಗಳಿಗೆ ಸಾಕಾಗುವಷ್ಟು ಕಚ್ಚಾ ತೈಲದ ಸಂಗ್ರಹ ತನ್ನಲ್ಲಿದೆ ಎಂದು ಎಂಆರ್‌ಪಿಎಲ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.