ADVERTISEMENT

ವಿಟಿಯು 1,100 ವಿದ್ಯಾರ್ಥಿಗಳಿಗೆ ಎಐ ತರಬೇತಿ

ಪಿಟಿಐ
Published 20 ಫೆಬ್ರುವರಿ 2024, 15:51 IST
Last Updated 20 ಫೆಬ್ರುವರಿ 2024, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕರ್ನಾಟಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವ್ಯಾಪ್ತಿಯ 1,100 ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಸೇರಿದಂತೆ ಸಂವಹನ ಸಾಧನ  ಮತ್ತು ಕ್ಲೌಡ್‌ ಸೇವೆ ಬಗ್ಗೆ ತರಬೇತಿ ನೀಡಲು ‌ಸ್ಯಾಮ್ಸಂಗ್‌ ಸೆಮಿಕಂಡಕ್ಟರ್‌ ಇಂಡಿಯಾ ರೀಸರ್ಚ್‌ (ಎಸ್‌ಎಸ್ಐಆರ್‌) ಸಂಸ್ಥೆ ನಿರ್ಧರಿಸಿದೆ.

ವಿಶ್ವವಿದ್ಯಾಲಯದಲ್ಲಿ ಸಂಸ್ಥೆಯು ಆರಂಭಿಸಿರುವ ಸ್ಯಾಮ್ಸಂಗ್‌ ಇನೋವೇಷನ್‌ ಕ್ಯಾಂಪಸ್‌ ಕಾರ್ಯಕ್ರಮದಡಿ ಈ ತರಬೇತಿ ನೀಡಲಾಗುತ್ತದೆ. ಯುವಕರಿಗೆ ಉನ್ನತ ಕೌಶಲ ಜ್ಞಾನ ನೀಡಿ ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.

ADVERTISEMENT

ಎಸ್‌ಎಸ್‌ಐಆರ್‌ ಹಾಗೂ ವಿಟಿಯು ನಡುವಿನ ಪ್ರಾಯೋಗಿಕ ಯೋಜನೆ ಇದಾಗಿದೆ. ಆಧುನಿಕ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಕೌಶಲ ಬೆಳೆಸುವ ಮೂಲಕ ಕರ್ನಾಟಕದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುವುದು ಇದರ ಗುರಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸ್ಯಾಮ್ಸಂಗ್‌ ಕಂಪನಿಯ ನುರಿತ ಬೋಧಕರ ತಂಡವು ಬಿ.ಇ ಮತ್ತು ಬಿ.ಟೆಕ್‌ ಪದವಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ತಂತ್ರಜ್ಞಾನ, ಮೂಲ ತಂತ್ರಾಂಶ ಕೌಶಲ ಮತ್ತು ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸಲು ಅಗತ್ಯವಿರುವ ಕೌಶಲದ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.