ADVERTISEMENT

‘ಹೂಡಿಕೆ ಮಾಡದ್ದರಿಂದ ಇಂಧನ ಬೆಲೆ ಹೆಚ್ಚಳ’

ರಾಯಿಟರ್ಸ್
Published 9 ಮೇ 2022, 13:00 IST
Last Updated 9 ಮೇ 2022, 13:00 IST

ರಿಯಾದ್ (ರಾಯಿಟರ್ಸ್): ಕಚ್ಚಾ ತೈಲ ಸಂಸ್ಕರಣೆಯ ಸಾಮರ್ಥ್ಯ ಹೆಚ್ಚಿಸಲು ಹೂಡಿಕೆ ಮಾಡದ ಕಾರಣದಿಂದಾಗಿ ಕಚ್ಚಾ ತೈಲ ಹಾಗೂ ವಿಮಾನ ಇಂಧನ, ಡೀಸೆಲ್ ಬೆಲೆಗಳ ನಡುವೆ ಬಹಳ ವ್ಯತ್ಯಾಸ ಇದೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವ ರಾಜಕುಮಾರ ಅಬ್ದುಲ್‌ಅಜೀಜ್ ಬಿನ್ ಸಲ್ಮಾನ್ ಹೇಳಿದ್ದಾರೆ.‌

‘ಇಂಧನಗಳ ಬೆಲೆಯು ಭಾರಿ ಏರಿಕೆ ಕಂಡಿದೆ. ಕಚ್ಚಾ ತೈಲದ ಬೆಲೆ ಹಾಗೂ ತೈಲೋತ್ಪನ್ನಗಳ ಬೆಲೆಯ ನಡುವೆ ಕೆಲವೆಡೆ ಶೇಕಡ 60ರಷ್ಟು ವ್ಯತ್ಯಾಸವಿದೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT