ಆರ್‌ಬಿಐ
ಮುಂಬೈ: ಸರ್ಕಾರಿ ವಲಯದ ಕೆಲವು ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯ ಠೇವಣಿ ಮೇಲೆ ನೀಡುವ ಬಡ್ಡಿದರದ ಪ್ರಮಾಣ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಜುಲೈ ತಿಂಗಳ ಬುಲೆಟಿನ್ ತಿಳಿಸಿದೆ.
2011ರ ಅಕ್ಟೋಬರ್‌ನಲ್ಲಿ ಆರ್‌ಬಿಐ ಉಳಿತಾಯ ಖಾತೆಯ ಠೇವಣಿ ಮೇಲಿನ ಬಡ್ಡಿದರವನ್ನು ನಿಯಂತ್ರಣವನ್ನು ತೆಗೆದುಹಾಕಿ, ಬ್ಯಾಂಕ್‌ಗಳು ತಮ್ಮದೇ ಆದ ಬಡ್ಡಿ ದರವನ್ನು ನಿರ್ಧರಿಸಲು ಅನುಮತಿ ನೀಡಿತು. ಅಂದಿನಿಂದ ಠೇವಣಿ ಪ್ರಮಾಣ ಇಳಿಕೆ ಆಗುತ್ತಿದೆ ಎಂದು ತಿಳಿಸಿದೆ.
ಇದರಿಂದ ಸರ್ಕಾರಿ ಬ್ಯಾಂಕ್‌ಗಳು ಮಾತ್ರವಲ್ಲದೆ, ಖಾಸಗಿ ಬ್ಯಾಂಕ್‌ಗಳಲ್ಲೂ ಸಹ ಹೊಸ ಠೇವಣಿ ಪ್ರಮಾಣ ಕಡಿಮೆಯಾಗಿದೆ.
ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಸೆಪ್ಟೆಂಬರ್ ತ್ರೈಮಾಸಿಕದಲ್ಲೂ ಸರ್ಕಾರ ಯಥಾಸ್ಥಿತಿಯಲ್ಲಿ ಇರಿಸಿದೆ.
ಪ್ರಸಕ್ತ ವರ್ಷದ ಫೆಬ್ರುವರಿಯಿಂದ ರೆಪೊ ದರವನ್ನು ಆರ್‌ಬಿಐ, ಶೇ 1ರಷ್ಟು ಕಡಿಮೆ ಮಾಡಿದೆ. ಬ್ಯಾಂಕ್‌ಗಳು ಸಹ ರೆಪೊ ಆಧಾರಿತ ಸಾಲದ ಬಡ್ಡಿ ದರವನ್ನು (ಆರ್‌ಎಲ್‌ಎಲ್‌ಆರ್) ಶೇ 1ರಷ್ಟು ಕಡಿಮೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.