ADVERTISEMENT

ಅಗ್ನಿವೀರರಿಗೆ ವಿಶೇಷ ಸಾಲ ಯೋಜನೆ: ಎಸ್‌ಬಿಐ

ಪಿಟಿಐ
Published 14 ಆಗಸ್ಟ್ 2025, 15:26 IST
Last Updated 14 ಆಗಸ್ಟ್ 2025, 15:26 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಅಗ್ನಿವೀರರಿಗೆ ವಿಶೇಷ ವೈಯಕ್ತಿಕ ಸಾಲದ ಯೋಜನೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಆರಂಭಿಸಿದೆ.

79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬ್ಯಾಂಕ್‌ ಈ ಹೊಸ ಯೋಜನೆ ಘೋಷಿಸಿದೆ. 

ಎಸ್‌ಬಿಐನಲ್ಲಿ ವೇತನ ಖಾತೆ ಹೊಂದಿರುವ ಅಗ್ನಿವೀರರು ಈ ಸಾಲದ ಯೋಜನೆಯ ಅಡಿ ₹4 ಲಕ್ಷದವರೆಗೆ ಯಾವುದೇ ಅಡಮಾನ ಇಲ್ಲದೇ ಸಾಲ ಪಡೆಯಬಹುದು. ಜೊತೆಗೆ ಸಂಸ್ಕರಣಾ ಶುಲ್ಕವು ಇರುವುದಿಲ್ಲ ಎಂದು ಬ್ಯಾಂಕ್ ಗುರುವಾರ ತಿಳಿಸಿದೆ.

ADVERTISEMENT

ಸೆಪ್ಟೆಂಬರ್‌ 30ರವರೆಗೆ ಎಲ್ಲ ರಕ್ಷಣಾ ಸಿಬ್ಬಂದಿಗೆ ಶೇ 10.50ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.