ADVERTISEMENT

ಎಸ್‌ಬಿಐ: ಸ್ಥಿರ ಠೇವಣಿ ಬಡ್ಡಿ ದರ ಕಡಿತ

​ಪ್ರಜಾವಾಣಿ ವಾರ್ತೆ
Published 27 ಮೇ 2020, 20:15 IST
Last Updated 27 ಮೇ 2020, 20:15 IST
-
-   

ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ತನ್ನ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿ ದರವನ್ನು ಶೇ 0.40ರಷ್ಟು ಇಳಿಸಿದೆ.

ಒಂದು ತಿಂಗಳಲ್ಲಿನ ಎರಡನೆ ಬಡ್ಡಿ ದರ ಕಡಿತ ಇದಾಗಿದೆ. ₹ 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಗಟು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 0.50ರಷ್ಟು ಕಡಿಮೆ ಮಾಡಿದೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಬ್ಯಾಂಕ್‌ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ.

ಹಿರಿಯ ನಾಗರಿಕರಿಗೆ ಪರಿಷ್ಕೃತ ಬಡ್ಡಿ ದರಗಳಿಗೆ ಹೆಚ್ಚುವರಿಯಾಗಿ ಶೇ 0.50ರಷ್ಟು ಬಡ್ಡಿ ನೀಡಲಿದೆ.

ADVERTISEMENT

7 ರಿಂದ 45 ದಿನಕ್ಕೆ ಶೇ2.9,46 ರಿಂದ 179 ದಿನಕ್ಕೆ ಶೇ3.9,180 ದಿನಗಳಿಂದ 1 ವರ್ಷಕ್ಕೆ ಶೇ 4.4,ಒಂದು ವರ್ಷದಿಂದ 3 ವರ್ಷಕ್ಕೆ ಶೇ5.1, ಮೂರರಿಂದ5 ವರ್ಷಕ್ಕೆ ಶೇ 5.3,ಐದರಿಂದ10 ವರ್ಷಕ್ಕೆ ಶೇ 5.4.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.