ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಠೇವಣಿಗಳ ಮೇಲಿನ
ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು (ಎಂಸಿಎಲ್‌ಆರ್) ಶೇ 0.05ರಷ್ಟು ತಗ್ಗಿಸಿದೆ.
ಇದರಿಂದಾಗಿ 1 ವರ್ಷದ ‘ಎಂಸಿಎಲ್‌ಆರ್‘ ಶೇ 8.50ರಿಂದ ಶೇ 8.45ಕ್ಕೆ ಇಳಿಯಲಿದೆ.
‘ಎಂಸಿಎಲ್‌ಆರ್’ಗೆ ಲಗತ್ತಾದ ಎಲ್ಲ ಬಗೆಯ ಸಾಲಗಳ ಬಡ್ಡಿ ದರವು ತಕ್ಷಣದಿಂದ (ಮೇ 10) ಶೇ 0.05ರಷ್ಟು ಕಡಿಮೆಯಾಗಲಿದೆ.
ಕಳೆದ ಒಂದು ತಿಂಗಳಿನಲ್ಲಿ ಎಸ್‌ಬಿಐ ಬಡ್ಡಿ ದರ ಕಡಿತದ ಎರಡನೆನಿರ್ಧಾರ ಇದಾಗಿದೆ.ಈ ವರ್ಷದ ಏಪ್ರಿಲ್ 10ರ ಕಡಿತವೂ ಸೇರಿದಂತೆ ಗೃಹ ಸಾಲಗಳ ಬಡ್ಡಿ ದರ ಶೇ 0.15ರಷ್ಟು ಕಡಿಮೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.