ADVERTISEMENT

ಎಸ್‌ಬಿಐ: ಎಂಸಿಎಲ್‌ಆರ್‌ ಬಡ್ಡಿ ದರ ಕಡಿತ

ಪಿಟಿಐ
Published 8 ಜುಲೈ 2020, 14:10 IST
Last Updated 8 ಜುಲೈ 2020, 14:10 IST
ಎಸ್‌ಬಿಐ
ಎಸ್‌ಬಿಐ   

ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್‌ಆರ್‌) ಬಡ್ಡಿ ದರವನ್ನು ಶೇ 0.05 ರಿಂದ ಶೇ 0.10ರವರೆಗೆ ಕಡಿಮೆ ಮಾಡಿದೆ.

ಮೂರು ತಿಂಗಳವರೆಗಿನ ಅಲ್ಪಾವಧಿಯ ಸಾಲಗಳಿಗೆ ಈ ಹೊಸ (ಶೇ 6.65) ಬಡ್ಡಿ ದರವು ಇದೇ 10ರಿಂದ ಅನ್ವಯವಾಗಲಿದೆ. ‘ಎಂಸಿಎಲ್ಆರ್‌‘ ಕಡಿತದಿಂದ ಸಾಲ ಪಡೆಯುವುದಕ್ಕೆ ಉತ್ತೇಜನ ದೊರೆಯಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಬ್ಯಾಂಕ್‌ನ ಎಂಸಿಎಲ್‌ಆರ್‌ ಅನ್ನು ಸತತ 14ನೇ ಬಾರಿಗೆ ಇಳಿಸಲಾಗಿದೆ. ಇದು ದೇಶಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಅತ್ಯಂತ ಕಡಿಮೆ ಮಟ್ಟದ ಬಡ್ಡಿ ದರವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.