ADVERTISEMENT

ಎಸ್‌ಬಿಐ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ

ಪಿಟಿಐ
Published 28 ನವೆಂಬರ್ 2018, 18:52 IST
Last Updated 28 ನವೆಂಬರ್ 2018, 18:52 IST
   

ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಅವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.10ರವರೆಗೂ ಹೆಚ್ಚಿಸಿದೆ.

₹1 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಸಂಬಂಧಿಸಿದ ಬಡ್ಡಿ ದರವು ಶೇ 0.05 ರಿಂದ ಶೇ 0.10ರವರೆಗೆ ಏರಿಕೆಯಾಗಿದೆ. ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದರಿಂದ ಗ್ರಾಹಕರಿಗೆ ನೀಡುವ ಬಡ್ಡಿ ದರ ಶೇ 6.80ಕ್ಕೆ ತಲುಪಿದೆ ಎಂದು ಬ್ಯಾಂಕ್‌ ಜಾಲತಾಣದಲ್ಲಿ ತಿಳಿಸಿದೆ.

ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಬಡ್ಡಿದರ ಶೇ 6.75 ರಿಂದ ಶೇ 6.80ಕ್ಕೆ ಹೆಚ್ಚಿಸಲಾಗಿದೆ.ಹಿರಿಯ ನಾಗರಿಕರಿಗೆ ಶೇ 7.25 ರಿಂದ ಶೇ 7.30ಕ್ಕೆ ಏರಿಕೆಯಾಗಿದೆ.

ADVERTISEMENT

ಈ ತಿಂಗಳ ಆರಂಭದಲ್ಲಿ ಎಚ್‌ಡಿಎಫ್‌ ಬ್ಯಾಂಕ್‌ ಮತ್ತು ಐಸಿಐಸಿಐ ಬ್ಯಾಂಕ್‌ಗಳು ಠೇವಣಿ ಮೇಲಿನ ಬಡ್ಡಿದರವನ್ನು ಕ್ರಮವಾಗಿ ಶೇ 0.5 ಮತ್ತು ಶೇ 0.25ರವರೆಗೂ ಏರಿಕೆ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.