
ಪಿಟಿಐ
ಎಸ್‌ಬಿಐ
ನವದೆಹಲಿ: ಇನ್ನು ನಾಲ್ಕು ವರ್ಷಗಳಲ್ಲಿ ಭಾರತವು ಮೇಲ್ಮಧ್ಯಮ ವರ್ಗದ ಆದಾಯ ಹೊಂದಿರುವ ದೇಶವಾಗಿ ಪರಿವರ್ತನೆ ಕಾಣಲಿದೆ, ಆ ಮೂಲಕ ಚೀನಾ ಮತ್ತು ಇಂಡೊನೇಷ್ಯಾ ದೇಶಗಳ ಸಾಲಿಗೆ ಸೇರಲಿದೆ ಎಂದು ಎಸ್‌ಬಿಐ ರಿಸರ್ಚ್‌ನ ವರದಿಯು ಅಂದಾಜು ಮಾಡಿದೆ.
ಅಷ್ಟೇ ಅಲ್ಲ, 2028ರ ಸುಮಾರಿಗೆ ಭಾರತವು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಬೆಳೆಯಲಿದೆ ಎಂದೂ ವರದಿಯು ಹೇಳಿದೆ. ಮೊದಲ ಸ್ಥಾನದಲ್ಲಿ ಅಮೆರಿಕ, ಎರಡನೆಯ ಸ್ಥಾನದಲ್ಲಿ ಚೀನಾ ಇರಲಿವೆ. 1990ರಲ್ಲಿ 14ನೇ ಸ್ಥಾನದಲ್ಲಿ ಇದ್ದ ಭಾರತದ ಅರ್ಥ ವ್ಯವಸ್ಥೆಯ ಗಾತ್ರವು 2025ರಲ್ಲಿ ನಾಲ್ಕನೆಯ ಸ್ಥಾನಕ್ಕೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.