ADVERTISEMENT

ಸಾಲದ ಬಡ್ಡಿ ಹೆಚ್ಚಿಸಿದ ಎಸ್‌ಬಿಐ

ಪಿಟಿಐ
Published 15 ಜುಲೈ 2023, 15:50 IST
Last Updated 15 ಜುಲೈ 2023, 15:50 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಎಂಸಿಎಲ್‌ಆರ್‌ ಆಧಾರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.05ರಷ್ಟು ಹೆಚ್ಚಿಸಿದೆ. ಇದರಿಂದಾಗಿ ವಾಹನ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಇಎಂಐ ಹೆಚ್ಚಾಗಲಿದೆ.

ಬ್ಯಾಂಕ್‌ನ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಪರಿಷ್ಕೃತ ಬಡ್ಡಿದರವು ಶನಿವಾರದಿಂದ ಜಾರಿಗೆ ಬಂದಿದೆ. ಒಂದು ವರ್ಷದ ಎಂಸಿಎಲ್‌ಆರ್‌ ಶೇ 8.50ರಿಂದ ಶೇ 8.55ಕ್ಕೆ ಏರಿಕೆ ಆಗಿದೆ. ಎರಡು ವರ್ಷಗಳ ಎಂಸಿಎಲ್‌ಆರ್‌ ಶೇ 8.65, ಮೂರು ವರ್ಷಗಳ ಎಂಸಿಎಲ್‌ಆರ್‌ ಶೇ 8.75ಕ್ಕೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT