ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕ: ಎಸ್‌ಬಿಐ ನಿವ್ವಳ ಲಾಭ ಶೇ 74ರಷ್ಟು ಏರಿಕೆ

ಪಿಟಿಐ
Published 5 ನವೆಂಬರ್ 2022, 12:45 IST
Last Updated 5 ನವೆಂಬರ್ 2022, 12:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 79ರಷ್ಟು ಹೆಚ್ಚಾಗಿದ್ದು ₹13,265 ಕೋಟಿಗೆ ಏರಿಕೆ ಆಗಿದೆ.

ಸುಸ್ತಿ ಸಾಲ ಕಡಿಮೆ ಆಗಿರುವುದು ಹಾಗೂ ಬಡ್ಡಿ ವರಮಾನ ಹೆಚ್ಚಾಗಿರುವ ಕಾರಣಗಳಿಂದಾಗಿ ಲಾಭದಲ್ಲಿ ಏರಿಕೆ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ನ ಲಾಭವು ₹7,627 ಕೋಟಿ ಇತ್ತು. ಬ್ಯಾಂಕ್‌ನ ಒಟ್ಟು ವರಮಾನ ₹ 77,689 ಕೋಟಿಯಿಂದ ₹88,734 ಕೋಟಿಗೆ ಏರಿಕೆ ಆಗಿದೆ.

ADVERTISEMENT

ನಿವ್ವಳ ಬಡ್ಡಿ ವರಮಾನ (ಎನ್‌ಐಐ) ಶೇ 13ರಷ್ಟು ಹೆಚ್ಚಾಗಿ ₹35,183 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ಎನ್‌ಐಐ ₹31,184 ಕೋಟಿ ಇತ್ತು.

ಬ್ಯಾಂಕ್‌ನ ವಸೂಲಾಗದ ಸರಾಸರಿ ಸಾಲದ ಪ್ರಮಾಣವು 2022ರ ಸೆಪ್ಟೆಂಬರ್‌ 30ರ ಅಂತ್ಯಕ್ಕೆ ಶೇ 3.52ಕ್ಕೆ ಇಳಿಕೆ ಆಗಿದೆ. 2021ರ ಸೆಪ್ಟೆಂಬರ್‌ 30ರ ಅಂತ್ಯಕ್ಕೆ ಶೇ 4.90ರಷ್ಟು ಇತ್ತು. ನಿವ್ವಳ ಎನ್‌ಪಿಎ ಶೇ 1.52 ರಿಂದ ಶೇ 0.80ಕ್ಕೆ ಇಳಿಕೆ ಆಗಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹ 2,699 ಕೋಟಿಯಿಂದ ₹2,011 ಕೋಟಿಗೆ ಇಳಿಕೆ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಎಸ್‌ಬಿಐ ಸಮೂಹದ ಲಾಭವು ಶೇ 66ರಷ್ಟು ಹೆಚ್ಚಾಗಿ ₹14,752 ಕೊಟಿಗೆ ತಲುಪಿದೆ. ಒಟ್ಟು ವರಮಾನ ₹ 1.01 ಲಕ್ಷ ಕೋಟಿಯಿಂದ ₹1.14 ಲಕ್ಷ ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.