ADVERTISEMENT

ಗರ್ಭಿಣಿಯರ ನೇಮಕದ ಸುತ್ತೋಲೆ ಹಿಂಪಡೆದ ಎಸ್‌ಬಿಐ

ಪಿಟಿಐ
Published 29 ಜನವರಿ 2022, 19:46 IST
Last Updated 29 ಜನವರಿ 2022, 19:46 IST

ನವದೆಹಲ ವಿವಿಧ ವಲಯಗಳಿಂದ ಟೀಕೆಗಳು ವ್ಯಕ್ತವಾಗಿರುವುದರಿಂದ ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಸುತ್ತೋಲೆಯನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಶನಿವಾರ ಹಿಂದಕ್ಕೆ ಪಡೆದಿದೆ.

ನೇಮಕಾತಿಗೆ ಸಂಬಂಧಿಸಿದ ಫಿಟ್‌ನೆಸ್ ಮಾನದಂಡಗಳನ್ನು ಎಸ್‌ಬಿಐ ಈಚೆಗೆ ಪರಿಷ್ಕರಿಸಿತ್ತು. ಅದರಲ್ಲಿ ಗರ್ಭಿಣಿ ಅಭ್ಯರ್ಥಿಗಳ ನೇಮಕಕ್ಕೆ ಸಂಬಂಧಿಸಿದ ಮಾನದಂಡಗಳೂ ಇವೆ. ಅದರಂತೆ, ಮೂರು ತಿಂಗಳಿಗಿಂತ ಮೇಲ್ಪಟ್ಟ ಗರ್ಭಿಣಿ ಅಭ್ಯರ್ಥಿಯನ್ನು ‘ತಾತ್ಕಾಲಿಕವಾಗಿ ಅನರ್ಹ’ ಎಂದು ಪರಿಗಣಿಸಲಾಗುತ್ತದೆ ಹಾಗೂ ಹೆರಿಗೆ ಆದ ನಂತರ ನಾಲ್ಕು ತಿಂಗಳ ಒಳಗಾಗಿ ಬ್ಯಾಂಕ್‌ಗೆ ಸೇರಬಹುದು ಎಂದು ಹೇಳಲಾಗಿದೆ.

ಬ್ಯಾಂಕ್‌ನ ಈ ಹೊಸ ನಿಯಮಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಒಕ್ಕೂಟಗಳು ಮತ್ತು ದೆಹಲಿ ಮಹಿಳಾ ಆಯೋಗ ಸೇರಿದಂತೆ ವಿವಿಧ ಕಡೆಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ಸೂಚನೆಗಳನ್ನು ಸ್ಥಗಿತಗೊಳಿಸಲು ಮತ್ತು ಈ ವಿಷಯದಲ್ಲಿ ಹಿಂದಿನ ಸೂಚನೆಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಎಸ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.