ADVERTISEMENT

ನೇಮಕಾತಿ: 5,583 ಹುದ್ದೆಗೆ ಎಸ್‌ಬಿಐ ಅರ್ಜಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 14:23 IST
Last Updated 6 ಆಗಸ್ಟ್ 2025, 14:23 IST
ಎಸ್‌ಬಿಐ
ಎಸ್‌ಬಿಐ   

ನವದೆಹಲಿ: ದೇಶದಾದ್ಯಂತ ಖಾಲಿ ಇರುವ 5,583 ಕಿರಿಯ ಸಹಾಯಕ ಹುದ್ದೆಗಳಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಅರ್ಜಿ ಆಹ್ವಾನಿಸಿದೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 6ರಿಂದ ಆರಂಭವಾಗಿದ್ದು, 26ರವರೆಗೆ ಇರಲಿದೆ ಎಂದು ಬ್ಯಾಂಕ್ ಬುಧವಾರ ತಿಳಿಸಿದೆ. ಕಳೆದ ತಿಂಗಳು 505 ಪ್ರೊಬೆಷನರಿ ಅಧಿಕಾರಿಗಳು ಮತ್ತು 13,455 ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಮುಂದಾಗಿರುವುದಾಗಿ ತಿಳಿಸಿತ್ತು.

ಪ್ರಸ್ತುತ ದೇಶದಾದ್ಯಂತ 2.36 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಎಸ್‌ಬಿಐ ಹೊಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.