ADVERTISEMENT

ಎಸ್‌ಬಿಐನಿಂದ ಷೇರು ಮಾರಾಟ?

ರಾಯಿಟರ್ಸ್
Published 10 ಜುಲೈ 2025, 14:11 IST
Last Updated 10 ಜುಲೈ 2025, 14:11 IST
   

ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ₹25 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಸಾಂಸ್ಥಿಕ ಹೂಡಿಕೆದಾರರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್‌ಬರ್ಗ್‌ ನ್ಯೂಸ್‌’ ವರದಿ ಮಾಡಿದೆ.

ಎಸ್‌ಬಿಐ ಮುಂದಿನ ವಾರವೇ ಷೇರು ಮಾರಾಟ ಮಾಡಬಹುದು ಎಂದು ವರದಿಯು ಹೇಳಿದೆ. ಆದರೆ ಷೇರು ಮಾರಾಟ ಯೋಜನೆಯು ಅಂತಿಮಗೊಂಡಿಲ್ಲ, ಬದಲಾವಣೆಗಳು ಆಗಬಹುದು ಎಂದು ಕೂಡ ಅದರಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಾರವಾಗಿ ರಾಯಿಟರ್ಸ್‌ಗೆ ಎಸ್‌ಬಿಐ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಷೇರು ಮಾರಾಟಕ್ಕೆ ಬ್ಯಾಂಕಿನ ಆಡಳಿತ ಮಂಡಳಿಯು ಮೇ ತಿಂಗಳಲ್ಲಿ ಒಪ್ಪಿಗೆ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.