ADVERTISEMENT

ತನಿಖೆ ವ್ಯಾಪ್ತಿ ವಿಸ್ತರಿಸಿದ ‘ಸೆಬಿ’

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:00 IST
Last Updated 21 ಜುಲೈ 2019, 20:00 IST
ilfs
ilfs   

ನವದೆಹಲಿ (ಪಿಟಿಐ): ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ),ಇನ್‌ಫ್ರಾಸ್ಟ್ರಕ್ಚರ್‌ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಐಎಲ್‌ಆ್ಯಂಡ್‌ಎಫ್‌ಎಸ್‌) ಪ್ರಕರಣದ ತನಿಖಾ ವ್ಯಾಪ್ತಿಯನ್ನು ಹಿಗ್ಗಿಸಿದೆ.

ಕ್ರೆಡಿಟ್‌ ರೇಟಿಂಗ್‌ ಸಂಸ್ಥೆಗಳ ಪಾತ್ರದ ಕುರಿತಾಗಿಯೂ ತನಿಖೆ ನಡೆಸಲು ಮುಂದಾಗಿದೆ.

ಹಣಕಾಸು ಸ್ಥಿತಿ ಬಿಗಡಾಯಿಸಿದ್ದರೂ ಉತ್ತಮ ರೇಟಿಂಗ್ಸ್‌ ನೀಡುವಂತೆ ಸಂಸ್ಥೆಯ ಮಾಜಿ ಉನ್ನತಾಧಿಕಾರಿ
ಗಳು ರೇಟಿಂಗ್ಸ್‌ ಸಂಸ್ಥೆಗಳಿಗೆ ಆಮಿಷ, ಬೆದರಿಕೆ ಒಡ್ಡಿದ್ದಾರೆ ಎಂದು ಲೆಕ್ಕಪತ್ರ ಪರಿಶೋಧನಾ ಕಂಪನಿ ಗ್ರ್ಯಾಂಟ್‌ ಥೋರ್ನ್‌ಟನ್‌ ಶನಿವಾರ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಐದು ರೇಟಿಂಗ್ಸ್‌ ಸಂಸ್ಥೆಗಳ ಬಗ್ಗೆಯೂ ತನಿಖೆ ನಡೆಸಲು ‘ಸೆಬಿ’ ನಿರ್ಧರಿಸಿದೆ.

ADVERTISEMENT

ಐಎಲ್‌ಆ್ಯಂಡ್‌ಎಫ್‌ಎಸ್‌ ಸಮೂಹವು ರೇಟಿಂಗ್ಸ್‌ ಸಂಸ್ಥೆಗಳ ಅಧಿಕಾರಿಗಳ ಮಧ್ಯೆ ಇ–ಮೇಲ್‌ ವ್ಯವಹಾರ ನಡೆಸಿದೆ. ಸಂಸ್ಥೆಯು ಗಂಭೀರ ಸ್ವರೂಪದ ನಗದು ಸಮಸ್ಯೆ ಎದುರಿಸುತ್ತಿರುವುದು ರೇಟಿಂಗ್ಸ್‌ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ತಿಳಿದಿತ್ತು ಎಂದು ವರದಿಯಲ್ಲಿ ವಿವರಿಸಿದೆ.

2013ರ ಏಪ್ರಿಲ್‌ನಿಂದ 2018ರ ಸೆಪ್ಟೆಂಬರ್‌ ಅವಧಿಯಲ್ಲಿಕ್ರಿಸಿಲ್‌, ಕೇರ್‌ ರೇಟಿಂಗ್ಸ್‌, ಐಸಿಆರ್‌ಎ, ಇಂಡಿಯಾ ರೇಟಿಂಗ್ಸ್‌ ಮತ್ತು ಬ್ರಿಕ್‌ವರ್ಕ್‌ ಸಂಸ್ಥೆಗಳು ರೇಟಿಂಗ್ಸ್‌ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.