ADVERTISEMENT

ಎಲ್‌ಐಸಿ ಐಪಿಒ: ‘ಸೆಬಿ’ ಒಪ್ಪಿಗೆ

ಪಿಟಿಐ
Published 9 ಮಾರ್ಚ್ 2022, 10:52 IST
Last Updated 9 ಮಾರ್ಚ್ 2022, 10:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒಗೆ ಸಂಬಂಧಿಸಿದ ಕರಡು ದಾಖಲೆ ಪತ್ರಗಳಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.

ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ₹ 63 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಅನುಕೂಲ ಆಗಲಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಗುರಿ ತಲುಪಲು ನೆರವಾಗಲಿದೆ ಎಂದು ತಿಳಿಸಿವೆ.

ಎಲ್‌ಐಸಿಯು ಫೆಬ್ರುವರಿ 13ರಂದು ಕರಡು ದಾಖಲೆ ಪತ್ರಗಳನ್ನು ಸಲ್ಲಿಸಿತ್ತು. ಸೆಬಿಯು ಅತ್ಯಂತ ವೇಗವಾಗಿ, ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಕಂಪನಿಯೊಂದರ ಕರಡು ಕರಡು ದಾಖಲೆ ಪತ್ರಗಳಿಗೆ ಅನುಮತಿ ನೀಡಿರುವುದು ಇದೇ ಮೊದಲು.

ADVERTISEMENT

ಕರಡು ದಾಖಲೆ ಪತ್ರದಲ್ಲಿ ಎಲ್‌ಐಸಿಯ ಮಾರುಕಟ್ಟೆ ಮೌಲ್ಯದ ಬಗ್ಗೆ ಮಾಹಿತಿ ನೀಡಿಲ್ಲ. ನಿಗಮದ ಮಾರುಕಟ್ಟೆ ಮೌಲ್ಯವು ಇಂದಿನ ಆಸ್ತಿಗಳ ಮೌಲ್ಯ ಹಾಗೂ ಭವಿಷ್ಯದ ಲಾಭಗಳ ಇಂದಿನ ಮೌಲ್ಯದ ಮೂರು ಪಟ್ಟು ಅಥವಾ ಸುಮಾರು ₹ 16 ಲಕ್ಷ ಕೋಟಿ ಇರಬಹುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.