ನವದೆಹಲಿ: ವಜ್ರದ ಉದ್ಯಮಿ ಹಾಗೂ ಗೀತಾಂಜಲಿ ಜೆಮ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೋಕ್ಸಿಗೆ ಸೇರಿದ ಬ್ಯಾಂಕ್ ಖಾತೆಗಳು, ಷೇರುಗಳು, ಮ್ಯೂಚುವಲ್ ಫಂಡ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಆದೇಶಿಸಿದೆ.
ಕಂಪನಿಯ ಷೇರುಗಳ ಮಾರಾಟದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಚೋಕ್ಸಿಗೆ 2022ರಲ್ಲಿ ಸೆಬಿ ₹1.5 ಕೋಟಿ ದಂಡ ವಿಧಿಸಿತ್ತು. ಆದರೆ, ಚೋಕ್ಸಿ ಅದನ್ನು ಪಾವತಿಸುವಲ್ಲಿ ವಿಫಲರಾಗಿದ್ದರು. ಪ್ರಸಕ್ತ ವರ್ಷದ ಮೇ 15ರಂದು ಸೆಬಿ ನೋಟಿಸ್ ಜಾರಿಗೊಳಿಸಿ, 15 ದಿನದೊಳಗೆ ₹1.5 ಕೋಟಿ ದಂಡ ಮತ್ತು ₹60 ಲಕ್ಷ ಬಡ್ಡಿ ಸೇರಿ ಒಟ್ಟು ₹2.1 ಕೋಟಿ ಪಾವತಿಸಬೇಕು ಎಂದು ಹೇಳಿತ್ತು.
‘ಪಾವತಿ ಮಾಡದೆ ಇದ್ದಲ್ಲಿ ನಿಮಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಮೊತ್ತವನ್ನು ವಸೂಲಿ ಮಾಡಲಾಗುವುದು’ ಎಂದು ತಿಳಿಸಿತ್ತು.
ಬಾಕಿ ಮೊತ್ತವನ್ನು ಪಾವತಿಸಲು ಚೋಕ್ಸಿ ಮತ್ತೆ ವಿಫಲರಾಗಿದ್ದಾರೆ. ಹೀಗಾಗಿ ಸೆಬಿ, ಚೋಕ್ಸಿಗೆ ಸೇರಿದ ಬ್ಯಾಂಕ್ ಖಾತೆಗಳು, ಮ್ಯೂಚುವಲ್ ಫಂಡ್‌ಗಳು, ಲಾಕರ್‌ನಿಂದ ಬಾಕಿಯನ್ನು ವಸೂಲು ಮಾಡಿಕೊಳ್ಳುವಂತೆ ಬ್ಯಾಂಕ್‌ಗಳಿಗೆ, ಡೆಪೊಸಿಟರಿಗಳಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.