ADVERTISEMENT

ಸಾಧನಾ ಬ್ರಾಡ್‌ಕಾಸ್ಟ್‌ | ನಟ ಅರ್ಷದ್ ವಾರ್ಸಿ, 58 ಜನರಿಗೆ 5 ವರ್ಷ ನಿಷೇಧ: SEBI

ಪಿಟಿಐ
Published 30 ಮೇ 2025, 13:08 IST
Last Updated 30 ಮೇ 2025, 13:08 IST
<div class="paragraphs"><p>ಅರ್ಷದ್ ವಾರ್ಸಿ ಹಾಗೂ ಮರಿಯಾ ಗೊರೆಟ್ಟಿ</p></div>

ಅರ್ಷದ್ ವಾರ್ಸಿ ಹಾಗೂ ಮರಿಯಾ ಗೊರೆಟ್ಟಿ

   

ಇನ್‌ಸ್ಟಾಗ್ರಾಂ ಚಿತ್ರ

ನವದೆಹಲಿ: ಸಾಧನಾ ಬ್ರಾಡ್‌ಕಾಸ್ಟ್‌ ಷೇರುಗಳನ್ನು ಖರೀದಿಸುವಂತೆ ಹೂಡಿಕೆದಾರರ ದಾರಿ ತಪ್ಪಿಸುವ ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡ ಆರೋಪದಡಿ ಬಾಲಿವುಡ್ ನಟ ಅರ್ಷದ್ ವಾರ್ಸಿ, ಅವರ ಪತ್ನಿ ಮರಿಯಾ ಗೊರೆಟ್ಟಿ ಹಾಗೂ ಇತರ 57 ಜನರ ಮೇಲೆ 1ರಿಂದ 5 ವರ್ಷಗಳ ಅವಧಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಷೇಧ ಹೇರಿದೆ.

ADVERTISEMENT

ವಾರ್ಸಿ ಮತ್ತು ಮರಿಯಾಗೆ ತಲಾ ₹5ಲಕ್ಷ ದಂಡವನ್ನು ಸೆಬಿ ವಿಧಿಸಿದೆ. ಜತೆಗೆ ಷೇರು ಮಾರುಕಟ್ಟೆಯಲ್ಲಿ ಖರೀದಿ ಮತ್ತು ಮಾರಾಟ ಪ್ರಕ್ರಿಯೆಯಿಂದ ಒಂದು ವರ್ಷಗಳ ಅವಧಿಗೆ ನಿಷೇಧ ಹೇರಿದೆ. ಸಾಧನಾ ಬ್ರಾಡ್‌ಕಾಸ್ಟರ್‌ (ಈಗ ಇದು ಕ್ರಿಸ್ಟಲ್ ಬ್ಯುಸಿನೆಸ್‌ ಸಿಸ್ಟಮ್‌ ಲಿ.) ಉತ್ತೇಜಕರನ್ನೂ ಒಳಗೊಂಡು 57 ಪ್ರವರ್ತಕರ ಮೇಲೆ ₹5ಲಕ್ಷದಿಂದ ₹5 ಕೋಟಿವರೆಗೂ ಸೆಬಿ ದಂಡ ವಿಧಿಸಿದೆ.‌

ಈ ಎಲ್ಲಾ 59 ಜನರ ಗುಂಪು ಕಾನೂನುಬಾಹಿರವಾಗಿ ₹58.01 ಕೋಟಿ ಮತ್ತು ವಾರ್ಷಿಕ ಶೇ 12ರಷ್ಟು ಬಡ್ಡಿಯನ್ನು ಪಡೆದಿದ್ದಾರೆ. ಇದರಲ್ಲಿ ಅರ್ಷದ್ ₹ 41.70 ಲಕ್ಷ ಹಾಗೂ ಅವರ ಪತ್ನಿ ಮರಿಯಾ ₹50.35 ಲಕ್ಷ ಲಾಭವನ್ನು ಗಳಿಸಿದ್ದಾರೆ ಎಂದು ಸೆಬಿ ಹೇಳಿದೆ.

ಈ ಎಲ್ಲದರ ಹಿಂದೆ ಗೌರವ್ ಗುಪ್ತಾ, ರಾಕೇಶ್ ಕುಮಾರ್ ಗುಪ್ತಾ ಮತ್ತು ಮನೀಶ್ ಮಿಶ್ರಾ ಇದ್ದಾರೆ. ನಿರ್ದೇಶಕ ಸುಭಾಷ್ ಅಗರವಾಲ್‌ ಅವರು ಮನೀಶ್ ಮಿಶ್ರಾ ಮತ್ತು ಇತರ ಪ್ರವರ್ತಕರ ಜತೆ ಕೊಂಡಿಯಂತೆ ಕೆಲಸ ಮಾಡಿದ್ದಾರೆ ಎಂದು ಸೆಬಿ ಹೇಳಿದೆ. ಈ ಕುರಿತು 109 ಪುಟಗಳ ಆದೇಶವನ್ನು ಸೆಬಿ ಹೊರಡಿಸಿದೆ. 

2022 ಮಾರ್ಚ್ 8ರಿಂದ ನವೆಂಬರ್‌ 30ರವರೆಗೂ ಈ ಕಾನೂನುಬಾಹಿರ ಚಟುವಟಿಕೆ ನಡೆದಿದೆ ಎಂದು ಸೆಬಿ ವಿಸ್ತೃತ ತನಿಖೆ ಕೈಗೊಂಡಿತ್ತು. ಪ್ರಕರಣದ ತನಿಖೆ ಕುರಿತು 2023ರ ಮಾರ್ಚ್ 2ರಂದು ಸೆಬಿ ಮಧ್ಯಂತರ ಆದೇಶ ಬಿಡುಗಡೆ ಮಾಡಿತ್ತು. ಇದರಲ್ಲಿ 31 ಪ್ರವರ್ತಕರ ಹೆಸರನ್ನು ಉಲ್ಲೇಖಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.