
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಷೇರುಪೇಟೆಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಳ್ಳುವವರು ತಮ್ಮ ಸೆಬಿ ನೋಂದಣಿ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ತಿಳಿಸುವಂತೆ ಎಲ್ಲ ಸಂಸ್ಥೆಗಳಿಗೆ, ಏಜೆಂಟ್‌ಗಳಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೂಚನೆ ನೀಡಿದೆ.
ಷೇರು ದಲ್ಲಾಳಿಗಳು, ಮ್ಯೂಚುವಲ್ ಫಂಡ್‌ಗಳು, ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗಳು (ಎಎಂಸಿ), ಹೂಡಿಕೆ ಸಲಹೆಗಾರರು, ಸಂಶೋಧನಾ ವಿಶ್ಲೇಷಕರು, ಪರ್ಯಾಯ ಹೂಡಿಕೆ ನಿಧಿ (ಎಐಎಫ್), ಪೋರ್ಟ್‌ಫೋಲಿಯೊ ನಿರ್ವಾಹಕರು ಮತ್ತು ಇತರೆ ಮಧ್ಯವರ್ತಿಗಳಿಗೆ ಈ ನಿಯಮ ಅನ್ವಯ ಆಗಲಿದೆ.
ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಷೇರು ಮಾರುಕಟ್ಟೆಯ ಬಗ್ಗೆ ಅನಧಿಕೃತ ವ್ಯಕ್ತಿಗಳು ಪೋಸ್ಟ್ ಮಾಡುವ ವಿಷಯಗಳನ್ನು ಸೆಬಿ ನೋಂದಾಯಿತ ವ್ಯಕ್ತಿಗಳು ಪೋಸ್ಟ್ ಮಾಡಿದ ವಿಷಯಗಳಿಂದ ಪ್ರತ್ಯೇಕಿಸುವ ಅವಶ್ಯಕತೆಯಿದೆ ಎಂದು ಹೇಳಿದೆ.
ಈ ಹೊಸ ನಿಯಮಗಳು ಪಾರದರ್ಶಕತೆಯನ್ನು ಹೆಚ್ಚಿಸಲಿದ್ದು, ಹೂಡಿಕೆದಾರರನ್ನು ರಕ್ಷಿಸಲಿದೆ ಎಂದು ಹೇಳಿದೆ. ಈ ನಿಯಮ ಮೇ 1ರಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.