ADVERTISEMENT

ಕೊರೊನಾ: ಹಿರಿಯ ನಾಗರಿಕರಿಗೆ ಡಾಕ್ಸ್‌ಆ್ಯಪ್‌ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 19:45 IST
Last Updated 30 ಮಾರ್ಚ್ 2020, 19:45 IST
   

ಬೆಂಗಳೂರು: ‘ಕೊರೊನಾ–2‘ ವೈರಸ್‌ ಸೋಂಕು ಪೀಡಿತರ ಸಂಖ್ಯೆಯು ತ್ವರಿತವಾಗಿ ಹೆಚ್ಚುತ್ತಿರುವುದರಿಂದ ಹಿರಿಯ ನಾಗರಿಕರಿಗಾಗಿಯೇ ಇರುವ ದೇಶದ ಅತಿದೊಡ್ಡ ಆನ್‌ಲೈನ್‌ ಶಾಪಿಂಗ್‌ ತಾಣವಾಗಿರುವ ಸಿನಿಯಾರಿಟಿ (Seniority), ಆನ್‌ಲೈನ್‌ನಲ್ಲಿ ಆರೋಗ್ಯ ಸೇವೆ ನೀಡುವ ಡಾಕ್ಸ್‌ಆ್ಯಪ್‌ (DocsApp) ಸಹಯೋಗದಲ್ಲಿ ಸಹಾಯವಾಣಿ ಆರಂಭಿಸಿದೆ.

ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ಸಹಾಯವಾಣಿ (080 4719 3443) ಮೂಲಕ ಕೊರೊನಾ ಕುರಿತ ಅನುಮಾನಗಳನ್ನು ದೂರ ಮಾಡಲು, ಹಿರಿಯ ನಾಗರಿಕರ ಆತಂಕ ನಿವಾರಿಸಿ ಅರಿವು ಮೂಡಿಸಲಾಗುತ್ತಿದೆ.

ಈ ಸಹಾಯವಾಣಿ ನೆರವಿನಿಂದಮನೆಯಲ್ಲಿಯೇ ಕುಳಿತುಕೊಂಡು ಪರಿಣತ ವೈದ್ಯರ ಸಲಹೆ ಪಡೆಯಬಹುದು. ಎರಡೂ ಕಂಪನಿಗಳು ಕೊರೊನಾ ವೈರಸ್‌ ಕುರಿತ ಲೇಖನಗಳ ಮಾಹಿತಿಯನ್ನೂ ಒದಗಿಸಲಿವೆ.

ADVERTISEMENT

ಹಿರಿಯರ ಬಗ್ಗೆ ಕಾಳಜಿ ವಹಿಸುವ ಬ್ರ್ಯಾಂಡ್‌ ಆಗಿರುವ ಸಿನಿಯಾರಿಟಿಯು, ಹಿರಿಯ ನಾಗರಿಕರಲ್ಲಿ ವಿಶ್ವಾಸ ಮೂಡಿಸಲು ಈ ಸಹಾಯವಾಣಿ ಆರಂಭಿಸಿದೆ. ‘ಡಾಕ್ಸ್‌ಆ್ಯಪ್‌ ಜತೆಗಿನ ಸಹಯೋಗದಿಂದಾಗಿ ಅಸಂಖ್ಯ ಜನರನ್ನು ತಲುಪಲು ಸಾಧ್ಯವಾಗಿದೆ. ಜನರು ಅಗತ್ಯ ಕಾಳಜಿವಹಿಸಲು ನೆರವಾಗುವುದು ನಮ್ಮ ಉದ್ದೇಶವಾಗಿದೆ’ ಎಂದು ಕಂಪನಿಯ ಸಹ ಸ್ಥಾಪಕರಾದ ಆಯುಷ್‌ ಅಗರ್‌ವಾಲ್‌ ಮತ್ತು ತಪನ್‌ ಮಿಶ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.