ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ, ದಿನದ ವಹಿವಾಟಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 53 ಸಾವಿರ ಅಂಶಗಳ ಗಡಿಯನ್ನು ತಲುಪಿತ್ತು. ನಂತರ, ವರ್ತಕರು ಲಾಭ ಗಳಿಕೆಯ ವಹಿವಾಟಿಗೆ ಮುಂದಾದ ಕಾರಣ ಕುಸಿತ ಕಂಡು 52,588 ಅಂಶಗಳಲ್ಲಿ ಕೊನೆಗೊಂಡಿತು.
ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 26 ಅಂಶ ಏರಿಕೆ ಕಂಡಿದೆ. ಅಮೆರಿಕದ ಡಾಲರ್ ಎದುರು 27 ಪೈಸೆ ಕುಸಿತ ಕಂಡ ರೂಪಾಯಿ ಮೌಲ್ಯವು 74.37ಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.