ADVERTISEMENT

ವಾಯಿದಾ ವಹಿವಾಟಿನ ಪರಿಣಾಮ: ಸೂಚ್ಯಂಕ ಇಳಿಕೆ

ಪಿಟಿಐ
Published 25 ಜೂನ್ 2020, 13:13 IST
Last Updated 25 ಜೂನ್ 2020, 13:13 IST
ಕರಡಿ
ಕರಡಿ   

ಮುಂಬೈ: ಸರ್ಕಾರಿ ಸಾಲಪತ್ರಗಳ ಜೂನ್‌ ತಿಂಗಳ ವಾಯಿದಾ ವಹಿವಾಟು ಮುಕ್ತಾಯವು ಗುರುವಾರ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 581 ಅಂಶಗಳಷ್ಟು ಏರಿಳಿತ ಕಂಡು, ಅಂತಿಮವಾಗಿ 27 ಅಂಶಗಳ ಇಳಿಕೆಯೊಂದಿಗೆ 34,842 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್ಇ) ಸೂಚ್ಯಂಕ ನಿಫ್ಟಿ 16 ಅಂಶ ಇಳಿಕೆಯಾಗಿ 10,289 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ದಿನದ ವಹಿವಾಟಿನಲ್ಲಿ ಏಷ್ಯನ್‌ ಪೇಂಟ್ಸ್‌ ಷೇರು ಶೇ 3.30ರಷ್ಟು ಇಳಿಕೆಯಾಗಿದೆ. ಇನ್ಫೊಸಿಸ್, ಎಚ್‌ಸಿಎಲ್‌ ಟೆಕ್‌, ಒಎನ್‌ಜಿಸಿ, ಮಹೀಂದ್ರಾ, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಎಲ್‌ಆ್ಯಂಡ್‌ಟಿ ಷೇರುಗಳ ಮೌಲ್ಯದಲ್ಲಿಯೂ ಇಳಿಕೆಯಾಗಿದೆ.

ಐಟಿಸಿ, ಕೋಟಕ್ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎಚ್‌ಯುಎಲ್‌ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ 5.45ರವರೆಗೆ ಏರಿಕೆ ಕಂಡಿವೆ.

ಬಿಎಸ್‌ಇ ಮಧ್ಯಮ ಮತ್ತು ಸಣ್ಣ ಶ್ರೇಣಿಯ ಸೂಚ್ಯಂಕಗಳು ಶೇ 0.76ರಷ್ಟು ಹೆಚ್ಚಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.