ಮುಂಬೈ: ದೀಪಾವಳಿ ಹಬ್ಬದ ಅಂಗವಾಗಿ ದೇಶದ ಷೇರುಪೇಟೆಯಲ್ಲಿ ಮಂಗಳವಾರ ನಡೆದ ಮುಹೂರ್ತ ವಹಿವಾಟಿನಲ್ಲಿ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ.
ಮಂಗಳವಾರ ಮಧ್ಯಾಹ್ನ 1.45ರಿಂದ 2.45ರವರೆಗೆ ಈ ವಹಿವಾಟು ನಡೆಯಿತು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 62 ಅಂಶ ಏರಿಕೆಯಾಗಿ, 84,426 ಅಂಶಕ್ಕೆ ವಹಿವಾಟು ಕೊನೆಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 25 ಅಂಶ ಹೆಚ್ಚಳವಾಗಿ, 25,868ಕ್ಕೆ ಅಂತ್ಯಗೊಂಡಿತು.
ಶುಭಪ್ರದವಾಗಿರುವ ಮುಹೂರ್ತ ವಹಿವಾಟಿನಲ್ಲಿ ತೊಡಗುವುದರಿಂದ ಸಮೃದ್ಧಿ ಮತ್ತು ಹಣಕಾಸಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.