ADVERTISEMENT

329 ಅಂಶ ಚೇತರಿಕೆ ಕಂಡ ಸೂಚ್ಯಂಕ

ಪಿಟಿಐ
Published 26 ಜೂನ್ 2020, 14:19 IST
Last Updated 26 ಜೂನ್ 2020, 14:19 IST
ಸೆನ್ಸೆಕ್ಸ್
ಸೆನ್ಸೆಕ್ಸ್   

ಮುಂಬೈ: ಎರಡು ದಿನಗಳ ಕುಸಿತದ ನಂತರ ಮುಂಬೈ ಷೇರುಪೇಟೆಯು ಶುಕ್ರವಾರದ ವಹಿವಾಟಿನಲ್ಲಿ ಚೇತರಿಕೆ ಕಂಡಿತು.

ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹವು ಇಲ್ಲಿಯೂ ಪ್ರತಿಫಲನಗೊಂಡಿತು. ಐ.ಟಿ, ಬ್ಯಾಂಕ್‌ ಮತ್ತು ಇಂಧನ ಷೇರುಗಳು ತ್ವರಿತ ಗಳಿಕೆ ಸಾಧಿಸಿದ್ದರಿಂಧ ಸಂವೇದಿ ಸೂಚ್ಯಂಕವು 329 ಅಂಶಗಳ ಏರಿಕೆ ದಾಖಲಿಸಿ 35,171 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಈ ವಾರದಲ್ಲಿ ಸೂಚ್ಯಂಕವು 439 ಅಂಶಗಳ ಏರಿಕೆ ಕಂಡಿದೆ.

ಇನ್ಫೊಸಿಸ್‌ ಷೇರು ಬೆಲೆ ಗರಿಷ್ಠ (ಶೇ 6.94) ದಾಖಲೆ ಕಂಡಿತು. ನಂತರದ ಸ್ಥಾನದಲ್ಲಿ ಟಿಸಿಎಸ್‌, ಇಂಡಸ್‌ಇಂಡ್‌ ಬ್ಯಾಂಕ್‌, ಒಎನ್‌ಜಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎಚ್‌ಸಿಎಲ್‌ ಟೆಕ್‌ ಷೇರುಗಳು ಲಾಭ ಮಾಡಿಕೊಂಡವು.

ADVERTISEMENT

‘ಹಿಂದಿನ ಎರಡು ವಾರಗಳ ಕಾಲ ಏರುಗತಿಯಲ್ಲಿ ಸಾಗಿದ್ದ ಸೂಚ್ಯಂಕವು ಈ ವಾರ ಏರಿಳಿತ ಕಂಡಿತು. ಭಾರತ –ಚೀನಾ ಗಡಿ ವಿವಾದ ಮತ್ತು ಕೋವಿಡ್‌ ಪ್ರಕರಣಗಳಲ್ಲಿನ ಹೆಚ್ಚಳವು ವಹಿವಾಟಿನ ಮೇಲೆ ಪ್ರಭಾವ ಬೀರಿದೆ’ ಎಂದು ಎಂಕೆ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ಜೋಸೆಫ್‌ ಥಾಮಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.