ADVERTISEMENT

ಚೇತರಿಕೆ ಹಾದಿಗೆ ಮರಳಿದ ಸೆನ್ಸೆಕ್ಸ್‌, ನಿಫ್ಟಿ

ಪಿಟಿಐ
Published 25 ಅಕ್ಟೋಬರ್ 2021, 15:09 IST
Last Updated 25 ಅಕ್ಟೋಬರ್ 2021, 15:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಸೋಮವಾರದ ವಹಿವಾಟಿನಲ್ಲಿ ನಾಲ್ಕು ದಿನಗಳ ನಕಾರಾತ್ಮಕ ಚಲನೆಯಿಂದ ಹೊರಬಂದವು.

ಮುಂಬೈ ಷೇರುಪೇಟೆಯು ವಹಿವಾಟಿನ ಆರಂಭದಲ್ಲಿ ಇಳಿಮುಖವಾಗಿತ್ತು. ಆ ಬಳಿಕ ಚೇತರಿಕೆ ಹಾದಿಗೆ ಮರಳಿ 146 ಅಂಶ ಹೆಚ್ಚಾಗಿ 60,967 ಅಂಶಗಳಿಗೆ ತಲುಪಿತು.ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.76ರವರೆಗೂ ಇಳಿಕೆ ಕಂಡಿವೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 11 ಅಂಶ ಹೆಚ್ಚಾಗಿ 18,125 ಅಂಶಗಳಿಗೆ ತಲುಪಿತು.

ಐಸಿಐಸಿಐ ಬ್ಯಾಂಕ್‌ ಷೇರು ಮೌಲ್ಯವು ಶೇ 10.80ರಷ್ಟು ಏರಿಕೆ ಕಂಡಿತು. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್‌ ನಿವ್ವಳ ಲಾಭವು ₹ 5,511 ಕೋಟಿಗೆ ತಲುಪಿರುವುದು ಬ್ಯಾಂಕ್‌ನ ಷೇರು ಮೌಲ್ಯ ಹೆಚ್ಚಳಕ್ಕೆ ಕಾರಣ ಆಗಿದೆ.

ADVERTISEMENT

ಷೇರುಪೇಟೆಯ ವಹಿವಾಟು ಮಂದಗತಿಯಲ್ಲಿ ಆರಂಭ ಆಯಿತು. ಬಳಿಕ ಬ್ಯಾಂಕಿಂಗ್‌ ವಲಯದ ಷೇರುಗಳ ಬೆಂಬಲದಿಂದಾಗಿ ವಹಿವಾಟು ಚೇತರಿಕೆ ಹಾದಿಗೆ ಮರಳಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹ 75.08ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.