ADVERTISEMENT

ಸೆನ್ಸೆಕ್ಸ್‌ 639 ಅಂಶ ಏರಿಕೆ

ಪಿಟಿಐ
Published 22 ಜುಲೈ 2021, 15:40 IST
Last Updated 22 ಜುಲೈ 2021, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಮೂರು ದಿನಗಳ ಬಳಿಕ ಸಕಾರಾತ್ಮಕ ಹಾದಿಗೆ ಮರಳಿವೆ. ವಿದೇಶಿ ಮಾರುಕಟ್ಟೆಗಳ ಉತ್ತಮ ವಹಿವಾಟು ಹಾಗೂ ಐ.ಟಿ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯಗಳ ಗಳಿಕೆಯು ದೇಶಿ ಷೇರುಪೇಟೆಯ ಏರುಮುಖ ಚಲನೆಗೆ ಕಾರಣವಾದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 639 ಅಂಶ ಚೇತರಿಕೆ ಕಂಡು 52,837 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಹೂಡಿಕೆದಾರರ ಸಂಪತ್ತು ₹ 2.93 ಲಕ್ಷ ಕೋಟಿಯಷ್ಟು ಹೆಚ್ಚಾಗಿದ್ದು ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 233.94 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 192 ಅಂಶ ಏರಿಕೆ ಕಂಡು 15,824 ಅಂಶಗಳಿಗೆ ತಲುಪಿದೆ.

ADVERTISEMENT

ಜಾಗತಿಕ ಮಾರುಕಟ್ಟೆಗಳ ಸಕಾರಾತ್ಮಕ ಚಟುವಟಿಕೆಯಿಂದಾಗಿ, ಕೋವಿಡ್‌–19 ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಭೀತಿ ಮತ್ತು ವಿದೇಶಿ ಬಂಡವಾಳ ಹೊರಹರಿವಿನ ಆತಂಕದಿಂದ ಹೊರಬಂದ ದೇಶಿ ಷೇರುಪೇಟೆಗಳು ಏರುಗತಿಯ ವಹಿವಾಟು ನಡೆಸಿದವು ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.46ರಂತೆ ವಿನಿಮಯಗೊಂಡಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲ ದರ ಶೇ 1ರಷ್ಟು ಏರಿಕೆ ಆಗಿ ಬ್ಯಾರಲ್‌ಗೆ 72.95 ಡಾಲರ್‌ಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.