ADVERTISEMENT

ಬಜೆಟ್‌ ನಿರೀಕ್ಷೆ: ಸೂಚ್ಯಂಕ 665 ಅಂಶ ಜಿಗಿತ

ಪಿಟಿಐ
Published 31 ಜನವರಿ 2019, 20:15 IST
Last Updated 31 ಜನವರಿ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಯ ಮುಂಚಿನ ದಿನವಾದ ಗುರುವಾರದ ಷೇರುಪೇಟೆ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು 665 ಅಂಶಗಳಷ್ಟು ಜಿಗಿತ ಕಂಡಿದೆ.

ಬ್ಯಾಂಕಿಂಗ್‌, ಐ.ಟಿ, ಆಟೊಮೊಬೈಲ್‌ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ತಯಾರಿಕಾ ಸಂಸ್ಥೆಗಳ ಷೇರುಗಳಲ್ಲಿನ ವಹಿವಾಟುದಾರರ ಖರೀದಿ ಆಸಕ್ತಿ ಫಲವಾಗಿ ಸೂಚ್ಯಂಕವು ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತು. ತಿಂಗಳ ವಾಯಿದಾ ವಹಿವಾಟು ಕೊನೆಗೊಂಡಿರುವುದು ಕೂಡ ಸೂಚ್ಯಂಕದ ಹೆಚ್ಚಳಕ್ಕೆ ನೆರವಾಯಿತು. ಬಡ್ಡಿ ದರ ಕುರಿತು ಅಮೆರಿಕದ ಫೆಡರಲ್‌ ರಿಸರ್ವ್‌ ಮೃದು ಧೋರಣೆ ತಳೆದಿದ್ದರಿಂದ ಜಾಗತಿಕ ಷೇರುಪೇಟೆಗಳೂ ಚೇತರಿಕೆ ಕಂಡವು.

ನಾಲ್ಕು ವಹಿವಾಟಿನ ದಿನಗಳ ಕುಸಿತಕ್ಕೆ ಕೊನೆ ಹಾಡಿದ ಸೂಚ್ಯಂಕವು 665 ಅಂಶಗಳಷ್ಟು ಚೇತರಿಕೆ ಕಂಡು 36,256 ಅಂಶಗಳಿಗೆ ತಲುಪಿತು. ಎಲ್ಲ ವಲಯಗಳ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’, 179 ಅಂಶ ಹೆಚ್ಚಳಗೊಂಡು 10,831ಕ್ಕೆ ಏರಿಕೆಯಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.