ADVERTISEMENT

ಸೇವಾ ವಲಯದ ಚಟುವಟಿಕೆ ಹೆಚ್ಚಳ

ಪಿಟಿಐ
Published 5 ಫೆಬ್ರುವರಿ 2020, 16:45 IST
Last Updated 5 ಫೆಬ್ರುವರಿ 2020, 16:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸೇವಾ ವಲಯದ ಚಟುವಟಿಕೆ ಜನವರಿಯಲ್ಲಿ ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಹೊಸ ಯೋಜನೆಗಳಲ್ಲಿನ ಹೆಚ್ಚಳ, ಉದ್ಯೋಗ ಸೃಷ್ಟಿ ಹಾಗೂ ಸುಲಲಿತ ವಹಿವಾಟು ನಡೆಸಲು ಇರುವ ವಾತಾವರಣದಿಂದಾಗಿ ಸೇವಾ ವಲಯ ಉತ್ತಮ ಪ್ರಗತಿ ಕಂಡಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

ಸೇವಾ ವಲಯದ ವಹಿವಾಟು ಚಟುವಟಿಕೆ ಸೂಚ್ಯಂಕ ಡಿಸೆಂಬರ್‌ನಲ್ಲಿ 53.3 ಇತ್ತು. ಇದು ಜನವರಿಯಲ್ಲಿ 55.5ಕ್ಕೆ ಏರಿಕೆ ಕಂಡಿದೆ.

ADVERTISEMENT

‘ಸೇವಾ ವಲಯವು ಉತ್ತಮ ಬೆಳವಣಿಗೆ ಕಾಣುವ ಮೂಲಕ 2020ನೇ ವರ್ಷವನ್ನು ಆರಂಭಿಸಿದೆ. ಒಟ್ಟಾರೆಯಾಗಿ ಈ ವಲಯ ಸಕಾರಾತ್ಮಕ ಮಟ್ಟದಲ್ಲಿದ್ದು, ಉದ್ಯೋಗಾಕಾಂಕ್ಷಿತರಿಗೆ ಶುಭಸುದ್ದಿಯಾಗಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಮುಖ್ಯ ಆರ್ಥಿಕ ತಜ್ಞ ಪಾಲಿಯಾನ ಡಿ ಲಿಮಾ ತಿಳಿಸಿದ್ದಾರೆ.

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಆಗಲಿದ್ದು, ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.