ADVERTISEMENT

ಫೆಬ್ರುವರಿಯಲ್ಲಿ ಸೇವಾ ಚಟುವಟಿಕೆ ಅಲ್ಪ ಹೆಚ್ಚಳ

ಪಿಟಿಐ
Published 4 ಮಾರ್ಚ್ 2022, 12:22 IST
Last Updated 4 ಮಾರ್ಚ್ 2022, 12:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೇಡಿಕೆ ಸ್ಥಿತಿಯಲ್ಲಿ ಸುಧಾರಣೆ ಹಾಗೂ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಿಂದಾಗಿ ದೇಶದ ಸೇವಾ ವಲಯದ ಚಟುವಟಿಕೆಗಳು ಫೆಬ್ರುವರಿಯಲ್ಲಿ ಅಲ್ಪ ಏರಿಕೆ ಕಂಡಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಹೇಳಿದೆ.

ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಸೂಚ್ಯಂಕವು ಜನವರಿಯಲ್ಲಿ 51.5ರಷ್ಟು ಇತ್ತು. ಅದು ಫೆಬ್ರುವರಿಯಲ್ಲಿ 51.8ಕ್ಕೆ ಏರಿಕೆ ಆಗಿದೆ. ಆದರೆ, ಜುಲೈ ನಂತರದ ಎರಡನೆಯ ಅತ್ಯಂತ ಮಂದಗತಿಯಬೆಳವಣಿಗೆ ಇದಾಗಿದೆ ಎಂದು ತಿಳಿಸಿದೆ.

ಹೊಸ ಯೋಜನೆಗಳು ಮತ್ತು ಸೇವಾ ಚಟುವಟಿಕೆಗಳು ನಿಧಾನಗತಿಯ ಬೆಳವಣಿಗೆ ಸಾಧಿಸಿವೆ. ಹಣದುಬ್ಬರದ ಒತ್ತಡ, ಕಚ್ಚಾ ಸಾಮಗ್ರಿಗಳ ಕೊರತೆ ಮತ್ತು ಸ್ಥಳೀಯ ಚುನಾವಣೆಗಳು ಬೆಳವಣಿಗೆಯ ಮೇಲೆ ಪರಿಣಾಮ ಉಂಟುಮಾಡಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾದ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.