
ಪಿಟಿಐ
ನವದೆಹಲಿ: ಶಂಖ ಏರ್ ವಿಮಾನಯಾನ ಕಂಪನಿಯು 2026ರ ಮೊದಲ ತ್ರೈಮಾಸಿಕದಲ್ಲಿ ಸೇವೆ ಆರಂಭಿಸುವ ನಿರೀಕ್ಷೆ ಇದೆ.
ಬುಧವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಶಂಖ ಏವಿಯೇಷನ್ ಕಂಪನಿಯು, ತನ್ನ ವಿಮಾನಗಳು ಈಗ ತಾಂತ್ರಿಕ ಪರಿಶೀಲನೆಯ ಹಂತದಲ್ಲಿವೆ ಎಂದು ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರನ್ನು ಸೋಮವಾರ ಭೇಟಿ ಮಾಡಿರುವ ಶಂಖ ಏವಿಯೇಷನ್ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶರವಣ್ ಕುಮಾರ್ ವಿಶ್ವಕರ್ಮ ಅವರು ಕಂಪನಿಯ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ.
ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಕಂಪನಿಯು ಗರಿಷ್ಠ 25 ವಿಮಾನಗಳನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.