ನವದೆಹಲಿ: ಬೆಳ್ಳಿ ಬೆಲೆಯಲ್ಲಿ ಸೋಮವಾರ ₹7,000 ಹೆಚ್ಚಳವಾಗಿದ್ದು, ಪ್ರತಿ ಕೆ,ಜಿಗೆ ₹1.5 ಲಕ್ಷ ಬೆಲೆ ದಾಖಲಾಗಿದೆ. ಇದು ಬೆಳ್ಳಿ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.
ಚಿನ್ನದ ಬೆಲೆಯು ಹೊಸ ಗರಿಷ್ಠ ಮಟ್ಟ ಪ್ರತಿ 10 ಗ್ರಾಂಗೆ ₹1,19,500ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಫಾ ಅಸೋಸಿಯೇಶನ್ ತಿಳಿಸಿದೆ.
ಶೇ 99.9ರಷ್ಟು ಶುದ್ಧ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ₹1,500ನಷ್ಟು ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ₹1,19,500ಕ್ಕೆ ತಲುಪಿದೆ.
ಭಾನುವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ (ಎಲ್ಲ ತೆರಿಗೆಗಳು ಸೇರಿ) ₹1,18,000 ಆಗಿತ್ತು. ಶನಿವಾರ ₹1,17,400 ಆಗಿದ್ದ ಪ್ರತಿ 10 ಗ್ರಾಂ ಚಿನ್ನದ ಬೆಲೆ ಭಾನುವಾರ ₹1,18,900ಕ್ಕೆ ತಲುಪಿತ್ತು.
ಭಾನುವಾರ ₹ 1,43,000 ರಷ್ಟಿದ್ದ ಪ್ರತಿ ಕೆ.ಜಿ ಬೆಳ್ಳಿ ಬೆಲೆಯಲ್ಲಿ ಸೋಮವಾರ ₹7,000 ಹೆಚ್ಚಳವಾಗಿ 1,50,000ಕ್ಕೆ ತಲುಪಿತ್ತು.
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶೇ 2ರಷ್ಟು ಏರಿಕೆಯಾಗಿದ್ದು, ಪ್ರತಿ ಔನ್ಸ್ ಚಿನ್ನದ ಬೆಲೆ 3,824.61 ಡಾಲರ್ ಆಗಿದ್ದು, ಪ್ರತಿ ಔನ್ಸ್ ಬೆಳ್ಳಿ ಬೆಲೆ 47.18 ಡಾಲರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.