ADVERTISEMENT

ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಸಿಲ್ವರ್‌ ಲೇಕ್‌ ₹ 5,656 ಕೋಟಿ

ಪಿಟಿಐ
Published 4 ಮೇ 2020, 20:00 IST
Last Updated 4 ಮೇ 2020, 20:00 IST
-
-   

ನವದೆಹಲಿ: ತಂತ್ರಜ್ಞಾನ ಸಂಸ್ಥೆಗಳಲ್ಲಿ ಬಂಡವಾಳ ತೊಡಗಿಸುವ ಅಮೆರಿಕದ ಹೂಡಿಕೆ ಸಂಸ್ಥೆಯಾಗಿರುವ ಸಿಲ್ವರ್‌ ಲೇಕ್‌, ಮುಕೇಶ್ ಅಂಬಾನಿ ಒಡೆತನದ ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ₹ 5,655.75 ಕೋಟಿ ಹೂಡಿಕೆ ಮಾಡಿದೆ.

ಶೇ 10ರಷ್ಟು ಪಾಲು ಬಂಡವಾಳ ಖರೀದಿಸಲುಫೇಸ್‌ಬುಕ್‌ ₹ 43,574 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಮಾಡಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಗೊಂಡಿದೆ. ಸಿಲ್ವರ್‌ ಲೇಕ್‌, ಶೇ 1.15ರಷ್ಟು ಪಾಲು ಬಂಡವಾಳ ಖರೀದಿಸಲಿದೆ. ಇದರಿಂದ ಜಿಯೊ ಪ್ಲ್ಯಾಟ್‌ಫಾರ್ಮ್‌ನ ಷೇರು ಮೌಲ್ಯವು ₹ 4.90 ಲಕ್ಷ ಕೋಟಿಗೆ ಮತ್ತು ಕಂಪನಿಯ ಒಟ್ಟಾರೆ ಮೌಲ್ಯವು ₹ 5.15 ಲಕ್ಷ ಕೋಟಿಗೆ ತಲುಪಲಿದೆ. ಇದು ಫೇಸ್‌ಬುಕ್‌ ಹೂಡಿಕೆಯಿಂದಾದ ಷೇರು ಮೌಲ್ಯಕ್ಕಿಂತ ಶೇ 12.5ರಷ್ಟು ಹೆಚ್ಚಿಗೆ ಇದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಸಂಪೂರ್ಣ ಒಡೆತನದಲ್ಲಿ ಇರುವ ಜಿಯೊ ಪ್ಲಾಟ್‌ಫಾರ್ಮ್ಸ್‌, ಡಿಜಿಟಲ್‌ ಸಮಾಜ ನಿರ್ಮಾಣ ಉದ್ದೇಶದ ಹೊಸ ತಲೆಮಾರಿನ ತಂತ್ರಜ್ಞಾನ ಕಂಪನಿಯಾಗಿದೆ. ಜಿಯೊದ ಡಿಜಿಟಲ್‌ ಆ್ಯಪ್‌ ಮತ್ತು ಗರಿಷ್ಠ ವೇಗದ ಸಂವಹನ ಸೌಲಭ್ಯಗಳನ್ನು ಒಂದೇ ಬ್ರ್ಯಾಂಡ್‌ನಡಿ ಒದಗಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನಲ್ಲಿ ಹಣಕಾಸು ಹೂಡಿಕೆದಾರರು ಶೇ 20ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅದರ ಅರ್ಧ ಪಾಲನ್ನು ಈಗಾಗಲೇ ಫೇಸ್‌ಬುಕ್‌ ಖರೀದಿಸಿದೆ.

₹ 4.90 ಲಕ್ಷ ಕೋಟಿ: ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ನ ಷೇರು ಮೌಲ್ಯ
₹ 5.15 ಲಕ್ಷ ಕೋಟಿ: ಕಂಪನಿಯ ಒಟ್ಟಾರೆ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.