ADVERTISEMENT

ದೆಹಲಿಯಲ್ಲಿ ಬೆಳ್ಳಿ ದರ ₹2 ಲಕ್ಷ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:23 IST
Last Updated 17 ಡಿಸೆಂಬರ್ 2025, 15:23 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ಧಾರಣೆಯು ಇದೇ ಮೊದಲ ಬಾರಿಗೆ ₹2 ಲಕ್ಷ ದಾಟಿದೆ.

ಕೆ.ಜಿ ಬೆಳ್ಳಿ ಧಾರಣೆ ₹7,300ರಷ್ಟು ಹೆಚ್ಚಳವಾಗಿ, ₹2,05,800ರಂತೆ ಮಾರಾಟವಾಗಿದೆ. ಜಾಗತಿಕ ಮತ್ತು ದೇಶಿ ಮಾರುಕಟ್ಟೆಯಲ್ಲಿ ಬೆಳ್ಳಿಗೆ ಹೆಚ್ಚಿದ ಬೇಡಿಕೆಯು ಬೆಲೆ ಏರಿಕೆಗೆ ಕಾರಣ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ. ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿ ಬೆಲೆಯು ಕೆ.ಜಿಗೆ ₹1,98,500 ಇತ್ತು. 

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹600 ಹೆಚ್ಚಳವಾಗಿ, ₹1,36,500 ಆಗಿದೆ ಎಂದು ತಿಳಿಸಿದೆ.

ADVERTISEMENT

ಬೆಂಗಳೂರಿನಲ್ಲಿ ಕೆ.ಜಿ. ಬೆಳ್ಳಿ ದರ ಈಗಾಗಲೇ ₹2 ಲಕ್ಷದ ಗಡಿ ದಾಟಿ, ₹2,13,000 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.