ADVERTISEMENT

ಬೆಳ್ಳಿ ಬೆಲೆ ಒಂದೇ ದಿನ ₹11,500 ಏರಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 17:00 IST
Last Updated 10 ಡಿಸೆಂಬರ್ 2025, 17:00 IST
   

ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಒಂದೇ ದಿನ ₹11,500ರಷ್ಟು ಜಿಗಿತ ಕಂಡಿದೆ. ಕೆ.ಜಿ ಬೆಳ್ಳಿ ಧಾರಣೆ ₹1.92 ಲಕ್ಷಕ್ಕೆ ತಲುಪಿದೆ.

2024ರ ಡಿಸೆಂಬರ್‌ 31ರಂದು ಬೆಳ್ಳಿ ಧಾರಣೆ ಕೆ.ಜಿ.ಗೆ ₹89,700 ಇತ್ತು. ಇದುವರೆಗೆ ಬೆಳ್ಳಿ ದರ ಶೇ 114ರಷ್ಟು ಏರಿಕೆಯಾಗಿದ್ದು, ₹1,02,300ರಷ್ಟು ಹೆಚ್ಚಳವಾಗಿದೆ. ಅಕ್ಟೋಬರ್ 10ರಂದು ಬೆಳ್ಳಿ ಧಾರಣೆ ಒಂದೇ ದಿನ ₹8,500 ಹೆಚ್ಚಳವಾಗಿತ್ತು.

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹800ರಷ್ಟು ಹೆಚ್ಚಳವಾಗಿ, ₹1,32,400ರಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ADVERTISEMENT

‘ಬೆಳ್ಳಿ ಪೂರೈಕೆಯಲ್ಲಿ ಕೊರತೆ ಮತ್ತು ಬೆಳ್ಳಿಯಲ್ಲಿ ಹೆಚ್ಚಿದ ಹೂಡಿಕೆಯು ಬೆಲೆ ಏರಿಕೆಗೆ ಕಾರಣ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.